??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಕೃಷಿ ಸಾಲ 5 ಲಕ್ಷ ರೂ.ಗೆ ಏರಿಕೆಯಾಗಲಿ

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಸಹಕಾರ ಸಂಘ-ಸಂಸ್ಥೆಗಳಲ್ಲಿ ರೈತರಿಗೆ ನೀಡುವ ಕೃಷಿ ಸಾಲದ ಮೊತ್ತವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಅಭಿಪ್ರಾಯಪಟ್ಟರು.
ಹೋಬಳಿಯ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಸಕೋಟೆ ತಾಲೂಕಿನಲ್ಲಿ 9 ಸಹಕಾರ ಸಂಘಗಳಿದ್ದು, ಇವುಗಳ ಸಂಖ್ಯೆ 15ಕ್ಕೆ ಏರಿಯಾಗಬೇಕು. ರೈತಾಪಿ ವರ್ಗಕ್ಕೆ ಆಯಾ ಗ್ರಾಪಂ ವ್ಯಾಪ್ತಿಯಲ್ಲೇ ವ್ಯವಹಾರಗಳು ನೆಡೆಯುವ ಕೆಲಸ ಆಗಬೇಕು ಎಂದರು.
ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ ಮಾತನಾಡಿ, ಸೂಲಿಬೆಲೆ ಸಹಕಾರ ಸಂಘದಿಂದ ಸಮುದಾಯ ಭವನ ಕಟ್ಟಡ ನಿರ್ಮಾಣ, ಬ್ಯಾಂಕ್ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಸಾಲ ವಿತರಣೆ ಜತೆಯಲ್ಲೂ ಸಾಲ ವಸೂಲಾತಿಯಲ್ಲಿಯೂ ಮುಂಚೂಣಿಯಲಿದ್ದೇವೆ ಎಂದರು.
35 ಸದಸ್ಯರಿಗೆ 49.20 ಲಕ್ಷ ರೂ. ಶೂನ್ಯ ಬಡ್ಡಿಯ ಬೆಳೆಸಾಲದ ಚೆಕ್ ವಿತರಿಸಲಾಯಿತು.
ತಾಪಂ ಮಾಜಿ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮಲ್ಲಿಕಾರ್ಜುನ್, ಮೇಲ್ವಿಚಾರಕ ರಾಜಣ್ಣ, ಸೂಲಿಬೆಲೆ ಸಿಇಒ ಶ್ರೀನಿವಾಸಮೂರ್ತಿ, ಮೇಲ್ವಿಚಾರಕ ಎಸ್.ಕೆ.ವಸಂತಕುಮಾರ್, ಲೆಕ್ಕಿಗ ಜಿ.ಎಂ.ನಾಗೇಶ್, ಬ್ಯಾಂಕಿನ ಉಪಾಧ್ಯಕ್ಷ ಮುನಿಯಪ್ಪ, ನಿರ್ದೇಶಕರಾದ ಮುತ್ತುರಾಜ್, ನಾರಾಯಣಸ್ವಾಮಿ, ಮುನಿರಾಜು, ಜನಾರ್ದನರೆಡ್ಡಿ, ಮುತ್ಸಂದ್ರ ಆನಂದಪ್ಪ, ನಂಜುಮ್ಮ ಇತರರು ಇದ್ದರು.