ಜಿಲ್ಲೆ

ಸುಲಭಾ ನೀರಲಗಿ ಅಪರೂಪದ ಸಂಗೀತ ಶಿಕ್ಷಕಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಷ್ಯರಿಗೆ ಸಮಾಧಾನ, ತಾಳ್ಮೆಯಿಂದ ಸಂಗೀತ ಕಲಿಸಿದ ಅಪರೂಪದ ಸಂಗೀತ ಶಿಕ್ಷಕರು ಅನೇಕರಿದ್ದಾರೆ. ಅವರಲ್ಲಿ ಸುಲಭಾ ದತ್ತ ನೀರಲಗಿ ಸಹ ಒಬ್ಬರು ಎಂದು ಗಾಯಕ ಡಾ. ಮೃತ್ಯಂಜಯ ಶೆಟ್ಟರ್​ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಡಾ. ಸುಲಭಾ ದತ್ತ ನೀರಲಗಿ ಜನ್ಮದಿನ ನಿಮಿತ್ತ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕಲಾಶ್ರೀ ಸಂಗೀತ ಸಭಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಸುಲಭಾ ಅವರಂತಹ ಗಾಯಕರು, ಶಿಕ್ಷಕರು ಸಿಗುವುದು ಅತೀ ವಿರಳ. ಬೇಸರವಿಲ್ಲದೆ, ಮನದಟ್ಟಾಗುವಂತೆ ಸಂಗೀತ ಪಾಠ ಹೇಳುತ್ತಿದ್ದರು. ಸುಮಾರು 5 ದಶಕಗಳಿಂದ ಅವರನ್ನು ನೋಡಿದ್ದೇನೆ. ಅವರಿಂದ ಸಂಗೀತ ಶಿಕ್ಷಕರು ಕಲಿಯುವುದು ಸಾಕಷ್ಟಿದೆ. ಅವರಲ್ಲಿನ ಸರಳೆತಯೇ ಅವರಿಗೆ ಯಶಸ್ಸು ತಂದುಕೊಟ್ಟಿದೆ ಎಂದರು.
ಇನ್ನೋರ್ವ ಪ್ರಶಸ್ತಿ ಪುರಸತೆ ಡಾ. ಲತಾ ನಾಡಗೀರ ಮಾತನಾಡಿ, ಸ್ನೇಹಿತೆ ಸುಲಭಾ ಹೆಸರಿನಲ್ಲಿ ಪ್ರಶಸ್ತಿ ಲಭಿಸಿರುವುದು ಅಪೂರ್ವ ಕಾಣಿಕೆ. ಸುಲಭಾ ಸಹೃದಯ ಮಹಿಳೆ. ಕಲಾವಿದರ ಕಷ್ಟ, ನೋವಿಗೆ ಸ್ಪಂದಿಸಿ ನೆರವಾಗುವ ಸದ್ಗುಣ ಅವರಿಗಿತ್ತು. ಸುಲಭಾ ಹಾಡಿದರೆ ಅವರ ಗುರು ಗಂಗೂಬಾಯಿ ಹಾನಗಲ್​ ಗಾಯನವೇ ನೆನಪಾಗುತ್ತಿತ್ತು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂದ ಅಧ್ಯ ಚಂದ್ರಕಾಂತ ಬೆಲ್ಲದ ಅಧ್ಯತೆ ವಹಿಸಿದ್ದರು. ದತ್ತ ನೀರಲಗಿ, ಡಾ. ಸುಮಿತ್ರಾ ಕಾಡದೇವರಮಠ, ಶಂಕರ ಕುಂಬಿ, ಗುರು ಹಿರೇಮಠ, ಇತರರು ಇದ್ದರು.
ವೀರಣ್ಣ ವಡ್ಡೀನ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು.