ಇಳಕಲ್ಲ(ಗ್ರಾ): ಪ್ರಮುಖವಾಗಿ ನೇಕಾರಿಕೆಯನ್ನೇ ಅವಲಂಬಿಸಿರುವ ಸ್ವಕುಳಸಾಳಿ ಸಮಾಜದವರು ದತ್ತಾತ್ರೇಯ ಭಕ್ತರು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಇಲ್ಲಿನ ದತ್ತಾತ್ರೇಯ ದೇವಸ್ಥಾನದ ಶತಮಾನೋತ್ಸವ ಕಾರ್ಯಕ್ರಮದ ಮೂರನೇ ದಿನ ಶನಿವಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಷ್ಟಸಹಿಷ್ಣುಗಳಾದ ಸಮಾಜ ಬಾಂಧವರು ದೇವರಲ್ಲಿ ಅಪಾರ ಶ್ರದ್ಧೆ, ಭಕ್ತಿ ಹೊಂದಿದ್ದಾರೆ ಎಂದು ತಿಳಿಸಿದರು.
ರಮೇಶ ಚಿಲ್ಲಾಳ, ಚಂದ್ರಕಾಂತ ಭಂಡಾರಿ, ಜನಾರ್ಧನ ಾಣಿಭಾತೆ, ಮಲ್ಲಿಕಾರ್ಜುನ ಕಾಂಬಳೆ, ಎನ್. ಎಂ. ದಿವಟೆ, ಮಂಜುನಾಥ ಸುರಪುರ ಉಪಸ್ಥಿತರಿದ್ದರು.
ಗುರುಮಹಾಂತಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಮಾಜದ ಅಧ್ಯಕ್ಷ ನಾರಾಯಣಪ್ಪ ದಿವಟೆ ಅಧ್ಯಕ್ಷತೆ ವಹಿಸಿದ್ದರು.
ಬಳಿಕ ಸಾಮೂಹಿಕ ವಿವಾಹ, ಪಲ್ಲಕ್ಕಿ ಉತ್ಸವ, ಬೈಕ್ ರ‌್ಯಾಲಿ, ಮನರಂಜನೆ ಗೋಷ್ಠಿಗಳು ನಡೆದವು.