ಡಾ.ಸುಕೇತ ಕುಮಾರಿ ಶೆಟ್ಟಿ  
ಜಿಲ್ಲೆ

ಸುಕೇತ ಕುಮಾರಿಗೆ ಡಾಕ್ಟರೇಟ್ ಪದವಿ

ಹೆಬ್ರಿ: ಬೆಳಗಾವಿಯ ಕೆಎಲ್‌ಇ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾ ವಿದ್ಯಾಲಯದ ಕಾಯ ಚಿಕಿತ್ಸೆ ವಿಭಾಗದ ಸಹ ಪ್ರಾಧ್ಯಾಪಕಿ ದೊಂಡೆರಂಗಡಿ ಸುಕೇತಾ ಕುಮಾರಿ ಶೆಟ್ಟಿ ಮಂಡಿಸಿದ ಮಹಾಪ್ರಬಂಧಕ್ಕೆ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಚರ್ಸ್ ಡಾಕ್ಟರೇಟ್ ಪದವಿ ನೀಡಿದೆ.

ಕಾರ್ಕಳ ತಾಲೂಕಿನ ದೊಂಡೆರಂಗಡಿಯವರಾದ ಸುಕೇತಾ ಕುಮಾರಿ ಶೆಟ್ಟಿ ಅವರು ಕಡ್ತಮಾರ್ ಮನೆ ವಸಂತಿ ನಾರಾಯಣ ಶೆಟ್ಟಿ ದಂಪತಿ ಪುತ್ರಿ. ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾ ವಿದ್ಯಾಲಯದ ಶಲ್ಯತಂತ್ರ (ಸರ್ಜರಿ) ವಿಭಾಗದ ಪ್ರಾಧ್ಯಾಪಕ ಡಾ.ಲಕ್ಷ್ಮೀಕಾಂತ್ ಪತ್ನಿ.

ಎಫಿಕೇಸಿ ಆಫ್ ಇಂಟಿಗ್ರೇಟೆಡ್ ಆಯುರ್ವೇದ ಟ್ರೀಟ್ಮೆಂಟ್ ಪ್ರೋಟೋಕಾಲ್ ಇನ್ ಅನ್ ಕಂಟ್ರೋಲ್ಡ್ ಟೈಪ್ 2 ಡಯಾಬಿಟೀಸ್ ಮೆಲ್ಲಿಟಸ್ ಎ ರಾಂಡಮೈಸ್ಡ್ ಕಂಟ್ರೋಲ್ಡ್ ಟ್ರಯಲ್ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ನೀಡಲಾಗಿದೆ. ಕಾಲೇಜಿನ ಪ್ರಾಧ್ಯಾಪಕ ಹಾಗೂ ಕಾಯ ಚಿಕಿತ್ಸಾ ವಿಭಾಗದ ಡಾ.ಬಸವರಾಜ್ ತುಬಾಕಿ ಮಾರ್ಗದರ್ಶನ ನೀಡಿದ್ದಾರೆ. ಬೆಳಗಾವಿ ಕೆಎಲ್‌ಇ ಶಿಕ್ಷಣ ಸಮೂಹ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸುಹಾಸ್ ಕುಮಾರ ಶೆಟ್ಟಿ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.