ಮೂಡುಬಿದಿರೆ: ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಸುಜಾತಾ ಜೆ.ಶೆಟ್ಟಿ ಆಯ್ಕೆಯಾಗಿದ್ದಾರೆ. ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರ ಆದೇಶದಂತೆ ವ್ಯವಸ್ಥಾಪನಾ ಸಮಿತಿ ಸದಸ್ಯರ ಸಭೆಯಲ್ಲಿ ಆಯ್ಕೆ ನಡೆದಿದೆ.
ಸಮಿತಿ ಸದಸ್ಯರಾಗಿ ದೇವಸ್ಥಾನದ ಪ್ರಧಾನ ಅರ್ಚಕ ಐ.ರಾಘವೇಂದ್ರ ಭಟ್ ಇರುವೈಲ್, ಶಿವಾನಂದ ನಾಯ್ಕ, ದೀಪಾ, ಪ್ರದೀಪ್ ಶೆಟ್ಟಿ, ಪೂವಪ್ಪ ಸಾಲ್ಯಾನ್, ಶುಭಕರ ಕಾಜವ, ಪದ್ಮನಾಭ ಪೂಜಾರಿ ಮತ್ತು ಮೋಹನ್ ನಾಯಕ್ ಆಯ್ಕೆಯಾಗಿದ್ದಾರೆ.