ಹೆಬ್ಬಗೋಡಿ ನಗರಸಭೆ ನೂತನ ಅಧ್ಯಕ್ಷರಾಗಿ ಸುಜಾತ ಹರೀಶ್​ ಆಯ್ಕೆಯಾದರು. ಸಂಸದ ಡಾ.ಸಿ.ಎನ್​.ಮಂಜುನಾಥ್​, ಶಾಸಕ ಎಂ.ಕೃಷ್ಣಪ್ಪ, ಉಪಾಧ್ಯೆ ಸುಜಾತಾ ಕೆ ಪಿ ರಾಜು ಇತರರಿದ್ದರು. 
ಜಿಲ್ಲೆ

ಹೆಬ್ಬಗೋಡಿ ನಗರಸಭೆಗೆ ಸುಜಾತಾ ಹರೀಶ್​ ಅಧ್ಯಕ್ಷೆ

ಆನೇಕಲ್​ : ಹೆಬ್ಬಗೋಡಿ ನಗರಸಭೆಯ ನೂತನ ಅಧ್ಯಕ್ಷರಾಗಿ ಗುರುವಾರ ಸುಜಾತಾ ಹರೀಶ್​ ಅವಿರೋಧ ಆಯ್ಕೆಯಾಗಿದ್ದಾರೆ. ನೂತನ ಅಧ್ಯೆಯನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್​ ಗಾತ್ರದ ಹೂವಿನ ಹಾರ ಹಾಕಿ ಸನ್ಮಾನಿಸಿದರು. ಸಂಸದ ಡಾ.ಸಿ.ಎನ್​.ಮಂಜುನಾಥ್​ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ದೇಶಕ್ಕೆ ದೀಪಾವಳಿ ಹಾಗೂ ದಸರಾ ಕೊಡುಗೆ ನೀಡಿದ್ದಾರೆ, ನಾಲ್ಕು ಸ್ಲಾಬ್​ ಇದ್ದ ಜಿಎಸ್​ಟಿಯನ್ನು ಎರಡು ಸ್ಲಾಬಿಗೆ ಇಳಿಸುವ ಮೂಲಕ ದೇಶದ ಜನರ ಪರವಾಗಿ ನಿಂತಿದ್ದಾರೆ. ಹೆಲ್ತ್​ ಇನ್ಶೂರೆನ್ಸ್​ ಹಾಗೂ ಲೈಫ್​ ಇನ್ಶೂರೆನ್ಸ್​ಗೆ ಶೂನ್ಯ ಜಿಎಸ್​ಟಿ ಹಾಕುವ ಮೂಲಕ ಆರೋಗ್ಯದ ಕಡೆಗೆ ಹೆಚ್ಚಿನ ಹೊತ್ತು ನೀಡುವ ಕೆಲಸ ಮಾಡಿದ್ದಾರೆ ಇದರ ಜೊತೆಗೆ ಹಲವಾರು ದಿನಬಳಕೆ ವಸ್ತುಗಳು ಸೇರಿ ಶಿಕ್ಷಣ ಪರಿಕರಗಳ ಮೇಲೆ ಜಿ ಎಸ್​ ಟಿ ಇಳಿಸುವ ಮೂಲಕ ಜನಸಾಮಾನ್ಯರ ಹಾಗೂ ಮಧ್ಯಮ ವರ್ಗದವರ ಪರವಾಗಿ ಸರ್ಕಾರ ಇದೆ ಎನ್ನುವುದು ನರೇಂದ್ರ ಮೋದಿಯವರ ಆಶಯ ಆಗಿದೆ ಎಂದರು. ಬೆಂಗಳೂರು ದಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಹೆಬ್ಬಗೋಡಿ ನಗರಸಭೆ ಬಿಜೆಪಿ ಭದ್ರಕೋಟೆಯಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಜನರ ಮೂಲ ಸೌಕರ್ಯಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.

ಗ್ರೇಟರ್​ ಬೆಂಗಳೂರು ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ, ಸರ್ಕಾರ ಗ್ರೇಟರ್​ ಬೆಂಗಳೂರು ಮಾಡಿದ್ದು ಮುಗಿದ ಅಧ್ಯಾಯ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಬೆಂಗಳೂರನ್ನು ಇನ್ನಷ್ಟು ಸ್ವಚ್ಛ ಹಾಗೂ ಅಭಿವೃದ್ಧಿ ಮೂಲಕ ಬದಲಾವಣೆ ಮಾಡಬೇಕಿದೆ ಎಂದರು. ಹೆಬ್ಬಗೋಡಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಎಂ.ಜಯರಾಮ್​. ಬಿಜೆಪಿ ಹಿರಿಯ ಮುಖಂಡ ಹೆಬ್ಬಗೋಡಿ ಸದಾಶಿವರೆಡ್ಡಿ, ಯುವ ಮುಖಂಡ ಕೆ.ಪಿ.ರಾಜು, ಮುಖಂಡರಾದ ಗೊಲ್ಲಹಳ್ಳಿ ಪ್ರಬಾಕರ್​ ರೆಡ್ಡಿ, ಸಂಪಗಿರಾಮರೆಡ್ಡಿ, ಪ್ರಮೀಳಾ ಪಿ.ರಾಮಚಂದ್ರ, ನಗರಸಭೆ ಸದಸ್ಯರಾದ ಹೆಬ್ಬಗೋಡಿ ಶ್ರೀನಿವಾಸ್​ ರೆಡ್ಡಿ, ಬುಲೆಟ್​ ಮುನಿಯಲ್ಲಪ್ಪ, ಐಟಿಐ ರಮೇಶ್​, ನವೀನ್​ ರೆಡ್ಡಿ , ಕೇಶವರೆಡ್ಡಿ,ಡೈರಿ ಮಂಜುನಾಥ್​, ರೂಪಾ ಪ್ರಭಾಕರ್​, ಸಂತೋಷ್​, ರೇಣುಕಾ ಸತೀಶ್​, ರಾಮಚಂದ್ರಾರೆಡ್ಡಿ, ರಮ್ಯಾ, ನಾರಾಯಣಸ್ವಾಮಿ, ನಾಗರತ್ನ ವೆಂಕಟೇಶ್​, ರೇಣುಕಾ ವೆಂಕಟೇಶ್​, ಶೈಲ ರಾಮ್​ ದಾಸ್​ ಇದ್ದರು.

ಮುಂದಿನ ದಿನಗಳಲ್ಲಿ ನಗರಸಭೆ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುವುದು. ಹೆಬ್ಬಗೋಡಿಯಲ್ಲಿ ಉಂಟಾಗಿರುವ ಟ್ರಾಫಿಕ್​ ಸಮಸ್ಯೆ ಬಗ್ಗೆ ಹರಿಸುವುದು ಸೇರಿ ಮೂಲ ಸೌಕರ್ಯಗಳಿಗೆ ಒತ್ತು ನೀಡುತ್ತೇನೆ. > ಸುಜಾತ ಹರೀಶ್​ ನೂತನ ಅಧ್ಯಕ್ಷೆ