ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಎಸ್‌ಟಿಬಿಟಿ ಸಮೀಪದ ಬಿಗ್ ಬಜಾರ ಮುಂಭಾಗ ಗಚ್ಚಿನಮನಿ ಟವರ್‌ದಲ್ಲಿ ಹೊಸದಾಗಿ ಆರಂಭಿಸಲಾಗಿರುವ ಹೈಟೆಕ್ ಚಿಕಿತ್ಸಾ ಸವಲತ್ತುಗಳನ್ನು ಹೊಂದಿರುವ ಸುಜನಿ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನಾ ಸಮಾರಂಭವು ಶ್ರಾವಣ ಸೋಮವಾರದಂದು ಸಂಭ್ರಮದಿಂದ ಜರುಗಿತು.
ತಾಯಿ-ಮಕ್ಕಳಿಗೆ ತುರ್ತು ವೇಳೆಯ ಚಿಕಿತ್ಸೆ ನೀಡಲು ಅತ್ಯಾಧುನಿಕ ಸಲಕರಣೆಗಳನ್ನು ಹೊಂದಿರುವ ಆಸ್ಪತ್ರೆಯನ್ನು ಸಣ್ಣ ಕೈಗಾರಿಕೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಜತೆಗೂಡಿ ಉದ್ಘಾಟಿಸಿದರು.
ಹಿಂದುಳಿದ ಪ್ರದೇಶದಲ್ಲಿ ಮತ್ತೊಂದು ದೊಡ್ಡ ಆಸ್ಪತ್ರೆ ಆರಂಭಗೊಳ್ಳುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕಲಬುರಗಿ ಮುಂಚೂಣಿಗೆ ಬಂದಿದೆ. ಇದರಿಂದಾಗಿ ತುರ್ತು ಹೊತ್ತಿನಲ್ಲಿ ಎಲ್ಲಿಗೂ ಚಿಕಿತ್ಸೆ ಸಿಗಲಿದೆ ಎಂದು ಸಚಿವ ದರ್ಶನಾಪುರ ಹೇಳಿದರು. ಹೊಸ ವೈದ್ಯರು ಸೇರಿಕೊಂಡು ಆಸ್ಪತ್ರೆ ಆರಂಭಿಸುವ ಮೂಲಕ ರೋಗಿಗಳ ಸೇವೆಗೆ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳೆಯಲಿ ಎಂದರು.
ಶಾಸಕರಾದ ಚನ್ನಾರೆಡ್ಡಿ ತುನ್ನೂರ ಯಾದಗಿರಿ, ಶರಣಗೌಡ ಕಂದಕೂರ ಗುರುಮಠಕಲ್, ಸಮಾಜ ಸೇವಕಿ ಗುರಮ್ಮ ಸಿದ್ದಾರೆಡ್ಡಿ, ಯುನೈಟೆಡ್ ಆಸ್ಪತ್ರೆಯ ಅಧ್ಯಕ್ಷರಾದ ಡಾ.ವಿಕ್ರಮ ಸಿದ್ದಾರಡ್ಡಿ, ಸುಜನಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಸುಚಿತ ಪಾಟೀಲ್, ಡಾ.ಪೂರ್ಣಿಮಾ ಪಾಟೀಲ್, ಡಾ.ಪ್ರಶಾಂತ ಕುಲಕರ್ಣಿ , ಹೋಮ್ ಗಾರ್ಡ್ ಕಮಾಂಡೆAಟ್ ಸಂತೋಷ ಪಾಟೀಲ್ ಮೊದಲಾದವರಿದ್ದರು. ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಶಾಸಕರಾದ ಎಂ.ವೈ.ಪಾಟೀಲ್, ಬಿ.ಆರ್.ಪಾಟೀಲ್ ಇತರರು ಆಗಮಿಸಿ ಶುಭ ಕೋರಿದರು.
ಪ್ರಮುಖರಾದ ಡಾ.ಬಾಬುರಾವ ಹುಡಗಿಕರ್,ಡಾ.ಜಯಪ್ರಕಾಶ ಪಾಟೀಲ್, ಡಾ.ಓಂಪ್ರಕಾಶ ಪಾಟೀಲ್, ಸದಾಶಿವರೆಡ್ಡಿ ಪಾಟೀಲ್,ಸಂಧ್ಯಾ ಕುಲಕರ್ಣಿ, ಕವಿತಾ ಪಾಟೀಲ್, ರಾಮಚಂದ್ರ ಕುಲಕರ್ಣಿ, ಮಮತಾ ಪಾಟೀಲ್, ದಾವೂದ್ ಮೊದಲಾದವರಿದ್ದರು.