ಜಿಲ್ಲೆ

ಅನ್​ ಲೈನ್​ ಲೋನ್​ ಕಾಟಕ್ಕೆ ಬೇಸತ್ತು ಆತ್ಮಹತ್ಯೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಆನ್​ ಲೈನ್​ ಲೋನ್​ ಕಾಟಕ್ಕೆ ಬೇಸತ್ತು ಖಾಸಗಿ ಕಂಪೆನಿ ಅಸಿಸ್ಟೆಂಟ್​ ಮ್ಯಾನೇಜರ್​ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವಳ್ಳಿ ಗ್ರಾಮದ ಹುಡ್ಕೊಕಾಲೋನಿ ನಿವಾಸಿ ರಾಘವೆಂದ್ರ ಎ. ಶಾನಭಾಗ (49) ಮೃತರು. ಇವರು ಆನ್​ಲೈನ್​ನಲ್ಲಿ ಲೋನ್​ ತೆಗೆದುಕೊಂಡಿದ್ದು ಇದರಿಂದ ನಿರಂತರ ಪೋನ್​ಕರೆಗಳು ಬರುತ್ತಿದ್ದವು. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಮಹಡಿಯ ಮೇಲಿರುವ ಹಾಲ್​ನ ಸಿಲೀಂಗ್​ ಪ್ಯಾನ್​ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.