ಕುಂದಾಪುರ: ಕೌಟುಂಬಿಕ ವಿಚಾರದಲ್ಲಿ ಉಂಟಾದ ವೈಮನಸ್ಸಿನಿಂದ ಮಾನಸಿಕವಾಗಿ ನೊಂದು ಕುಂಭಾಶಿ ಗ್ರಾಮದ ಗಣೇಶ ನಗರ ನಿವಾಸಿ ಮೋಹನ ಸುಬ್ಬ(70) ಎಂಬುವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೋಹನ ಸುಬ್ಬ ಮತ್ತು ಅವರ ಪತ್ನಿ ಮದ್ಯೆ ಆಗಾಗ ಕೌಟುಂಬಿಕ ವಿಚಾರದಲ್ಲಿ ಸಣ್ಣ-ಪುಟ್ಟ ಜಗಳವಾಗುತ್ತಿದ್ದು, ಮನಸ್ತಾಪ ಮಾಡಿಕೊಳ್ಳುತ್ತಿದ್ದರು. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.