ಜಿಲ್ಲೆ

ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಸೌಮ್ಯ ಆರ್

ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಬೇತೂರ್‌ಪಾರ ತಚ್ಚರಕುಂಡು ಎಂಬಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆಗೈದಿದ್ದಾಳೆ. ತಚ್ಚರಕುಂಡು ನಿವಾಸಿ ದಿ.ಬಾಬು ಎಂಬುವರ ಪುತ್ರಿ ಮಹಿಮಾ(20) ಮೃತಪಟ್ಟ ಯುವತಿ. ಬುಧವಾರ ಬೆಳಗ್ಗೆ ಮನೆ ಕೊಠಡಿಯೊಳಗೆ ಮಹಿಮಾ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದು, ತಕ್ಷಣ ಈಕೆಯನ್ನು ಕಾರಿನಲ್ಲಿ ಕಾಸರಗೋಡಿನ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಪಡಿಮರುದ್ ಎಂಬಲ್ಲಿ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದವರೆಲ್ಲರೂ ಅಪಾಯವಿಲ್ಲದೆ ಪಾರಾಗಿದ್ದು, ತಕ್ಷಣ ಬೇರೊಂದು ವಾಹನದಲ್ಲಿ ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದರೂ, ಮಹಿಮಾ ಅವರ ಜೀವ ಉಳಿಸಲು ಸಾಧ್ಯವಾಗಿಲ್ಲ. ಮಹಿಮಾ ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದರು. ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.