ಸಾಂದರ್ಭಿಕ ಚಿತ್ರ  
ಜಿಲ್ಲೆ

ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ

Dakshina Kannada


ಸುಳ್ಯ: ನಗರದ ಪರಿವಾರಕಾನ ಬಳಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಪರಿವಾರಕಾನ ನಿವಾಸಿ ನಿವೃತ್ತ ಫಾರೆಸ್ಟರ್ ಮೋನಪ್ಪ ಗೌಡ ಎಂಬುವರ ಪುತ್ರ ಸೋಮಶೇಖರ(45) ಆತ್ಮಹತ್ಯೆ ಮಾಡಿಕೊಂಡವರು. ಮನೆಯ ಹಿಂಬದಿಯ ಗುಡ್ಡೆಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.