ಕಾಸರಗೋಡು: ನಗರದ ಹೊಸ ಬಸ್‌ನಿಲ್ದಾಣ ವಠಾರದ ವಸತಿಗೃಹವೊಂದರ ಕೊಠಡಿಯಲ್ಲಿ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚೆಂಗಳ ರಹಮತ್ ನಗರ ನಿವಾಸಿ, ಟಿಪ್ಪರ್ ಚಾಲಕ ಹಸೈನಾರ್(33) ನೇಣಿಗೆ ಶರಣಾದ ಯುವಕ. ಸೋಮವಾರ ಕೊಠಡಿ ಪಡೆದಿದ್ದು, ಸಂಜೆ ವೇಳೆಗೆ ಮೃತದೇಹ ಪತ್ತೆಯಾಗಿದೆ. ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.