ಜಿಲ್ಲೆ

ತಿಮರಡ್ಡದ ಯುವಕ ಆತ್ಮಹತ್ಯೆ

ಸೌಮ್ಯ ಆರ್

ಕಡಬ: ಕಡಬ ಗ್ರಾಮದ ಕಳಾರ ಸಮೀಪದ ತಿಮರಡ್ಡ ನಿವಾಸಿ ಆಝರ್ (28) ಎಂಬುವರು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟಿಂಬರ್ ವೃತ್ತಿ ಮಾಡುತ್ತಿದ್ದ ಈತ ಶನಿವಾರ ಸಾಯಂಕಾಲ ಮಗುವಿನೊಂದಿಗೆ ಪೇಟೆಗೆ ತೆರಳಿ ವಾಪಸ್ಸಾಗಿ ಕೋಣೆಯೊಳಗೆ ಹೋಗಿ ಸೀರೆ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ, ಪತ್ನಿ ಮಕ್ಕಳೊಂದಿಗೆ ವಾಸವಾಗಿದ್ದ ಬೇರೆ ಮನೆ ಮಾಡುವ ವಿಚಾರದಲ್ಲಿ ಪತ್ನಿಯೊಂದಿಗೆ ಜಗಳವಾಗುತ್ತಿತ್ತು. ಹಾಗಾಗಿ ಸಂಸಾರದ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಡಬ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.