ಮಂಗಳೂರು : ಗುರುವಾರ ರಾತ್ರಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಅಂತಿಮ ಯಾತ್ರೆ ಬಂಟ್ವಾಳ ತಲುಪಿದೆ. ಮಧ್ಯಾನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ ಮೃತ ಸುಹಾಸ್ ಶೆಟ್ಟಿ ಅಂತಿಮ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ,
ಸದ್ಯಕ್ಕೆ ಬಿ.ಸಿ.ರೋಡಿನಿಂದ ಕಾರಿಂಜ ಪುಳಿಮಜಲಿನತ್ತ ತೆರಳಿದ ಸುಹಾಸ್ ಮೃತದೇಹವು ಸುಹಾಸ್ ಅಮರ್ ರೇ.. ಘೋಷ ವಾಕ್ಯದೊಂದಿಗೆ ಸಾಗುತ್ತಿದೆ.
ಸುಹಾಸ್ ಅಂತಿಮ ಯಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗಿಗಳಾದ ಹಿಂದೂ ಸಂಘಟನೆಯ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ವೇದವಾಸ್ ಕಾಮತ್, ಭರತ್ ಶೆಟ್ಟಿ, ಉಳಿಪ್ಪಾಡಿಗುತ್ತುರಾಜೇಶ್ ನಾಯಕ್, ಧಾರ್ಮಿಕ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಹರೀಶ್ ಪೂಂಜ, ಕಿಶೋರ್ ಪುತ್ತೂರು ಮತ್ತಿತರರು ಇದ್ದರು.
ಹತ್ಯೆಯ ಪ್ರಕರಣ ಸಂಬಂಧ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ದ.ಕ ಜಿಲ್ಲೆ ಬಂದ್ ಗೆ ಕರೆ ನೀಡಿರುವ ಜೊತೆಗೆ ಸಾವಿರಾರು ಹಿಂದೂ ಕಾರ್ಯಕರ್ತರು ಅಂತಿಮ ಯಾತ್ರೆಯಲ್ಲಿ ಭಾಗವಸಿದರು.
ಶುಕ್ರವಾರ ಬೆಳಗ್ಗೆ 10:30ಕ್ಕೆ ಎಜೆ ಆಸ್ಪತ್ರೆಯಿಂದ ಕಾರಿಂಜದ ತನಕ ಸುಹಾಸ್ ಅಂತಿಮ ಯಾತ್ರೆ ಆರಂಭಗೊಂತಿತ್ತು, ಹತ್ಯೆಯನ್ನು ಖಂಡಿಸಿ ಪ್ರಾಂತದ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಂಘಟನರಗಳಿಂದ ಪ್ರತಿಭಟನೆಗಳು ಆಯೋಜಿಜಿತ್ತು.