ಜಿಲ್ಲೆ

ಧರ್ಮ-ಸಂಸ್ಕೃತಿ ಇಲ್ಲವಾದರೆ ನೆಮ್ಮದಿ ದೂರ : ವಿಜಯ ಕುಮಾರ್ ಅಭಿಪ್ರಾಯ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಇಂದಿನ ದಿನಗಳಲ್ಲಿ ಹಣ, ಐಶ್ವರ್ಯ, ಒಡವೆ, ಕಾರು, ಬಂಗಲೆ ಎಲ್ಲ ಇದ್ದರೂ ನೆಮ್ಮದಿ ಇರುವ ಮನೆಯನ್ನು ಹುಡುಕುವುದು ತುಂಬಾ ಕಷ್ಟ. ನಾವು ಧರ್ಮ-ಸಂಸ್ಕೃತಿ, ಸಂಸ್ಕಾರದಿಂದ ದೂರವಾದರೆ ನೆಮ್ಮದಿ ಶಾಂತಿಯೂ ದೂರವಾಗುತ್ತದೆ ಎಂದು ಹಿಂದು ಜನಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕಾರ ವಿಜಯಕುಮಾರ್ ಹೇಳಿದರು.

ಒಳಮೊಗ್ರು ಗ್ರಾಮದ ಕುಂಬ್ರದ ಶ್ರೀರಾಮ ಭಜನಾ ಮಂದಿರದಲ್ಲಿ ಸ್ಪಂದನಾ ಸೇವಾ ಬಳಗ ವತಿಯಿಂದ ‘ಸುಜ್ಞಾನ ದೀಪಿಕೆ’ ಗ್ರಂಥ ವಿತರಣಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಷ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಒಳಮೊಗ್ರು, ಅರಿಯಡ್ಕ ಮತ್ತು ಕೆದಂಬಾಡಿ ಗ್ರಾಮದ 100ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿಗೆ ಸುಜ್ಞಾನ ದೀಪಿಕೆ ಗ್ರಂಥ ವಿತರಿಸಲಾಯಿತು. ಕುಂಬ್ರದ ಶ್ರೀರಾಮ ಭಜನಾ ಮಂದಿರ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ ಉಪಸ್ಥಿತರಿದ್ದರು. ಸೇವಾ ಬಳಗ ಸಂಚಾಲಕ ಸುಧಾಕರ ರೈ ಕುಂಬ್ರ ಸ್ವಾಗತಿಸಿದರು. ಸ್ಪಂದನ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ ಪ್ರಸ್ತಾವಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಜಾರತ್ತಾರು ನಿರೂಪಿಸಿದರು. ಕಾರ್ಯಾಧ್ಯಕ್ಷ ಅಶೋಕ್ ತ್ಯಾಜರಾಜೆ ವಂದಿಸಿದರು.

ಗ್ರಂಥ ಪಡೆದ ವಿದ್ಯಾರ್ಥಿಗಳಿಗೆ ನವರಾತ್ರಿ ವೇಳೆ ಮೌಲ್ಯಮಾಪನ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಭಾಗವಹಿಸಿದವರಿಗೆ ಧರ್ಮ ಶಿಕ್ಷಣ ಪ್ರಮಾಣ ಪತ್ರ ನೀಡಲಾಗುವುದು. ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುವುದು. ಮಕ್ಕಳ ವಾಟ್ಸಾೃಪ್ ಗ್ರೂಪ್ ರಚಿಸಿ ಪ್ರತಿದಿನ ರಾತ್ರಿ 8 ಗಂಟೆಗೆ ಧಾರ್ಮಿಕ ರಸಪ್ರಶ್ನೆ ಕಳುಹಿಸಲಾಗುವುದು. ಹೆಚ್ಚು ಸರಿ ಉತ್ತರ ನೀಡಿದವರಿಗೆ ಕೊನೆಯಲ್ಲಿ ಬಹುಮಾನ ನೀಡಲಾಗುವುದು. ರತನ್ ರೈ ಕುಂಬ್ರ ಸ್ಪಂದನ ಬಳಗ ಅಧ್ಯಕ್ಷ