{"data":{"pictureId":"57f442734898445b97a24809d68caf9b","appversion":"4.2.0","stickerId":"","filterId":"","infoStickerId":"","imageEffectId":"","playId":"","activityName":"","os":"android","product":"retouch","exportType":"","editType":"","alias":""},"source_type":"hypic","tiktok_developers_3p_anchor_params":"{"client_key":"awgvo7gzpeas2ho6","template_id":"","filter_id":[]}"} 
ಜಿಲ್ಲೆ

೬ ಲಕ್ಷ ಮೆ.ಟನ್ ಕಬ್ಬು ನುರಿಕೆ ಗುರಿ

ಚಿಕ್ಕೋಡಿ: ಜೈನಾಪುರ ಅರಿಹಂತ ಶುಗರ್ಸ್ ಪ್ರಸಕ್ತ ಹಂಗಾಮಿನಲ್ಲಿ ೬ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದೆ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.

ಸಮೀಪದ ಜೈನಾಪುರ ಅರಿಹಂತ ಶುಗರ್ಸ್ ಇಂಡಸ್ಟ್ರೀಸ್ ನಲ್ಲಿ ಕಬ್ಬು ನುರಿಸುವ ೮ನೇ ಹಂಗಾಮಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಅರಿಹಂತ ಶುಗರ್ಸ್ ೧೩೦ ದಿನದ ವರೆಗೆ ಕಬ್ಬು ನುರಿಸಲಿದೆ. ಕಳೆದ ೮ ವರ್ಷ ರೈತರಿಗೆ ಎಫ್ಆರ್‌ಪಿ ದರಕ್ಕಿಂತ ಹೆಚ್ಚಿನ ದರ ನೀಡಿದೆ. ರೈತ ಸಂಘಟನೆಗಳು ಹಾಗೂ ಜಿಲ್ಲಾಧಿಕಾರಿಗಳು ಕೂಡಿ ಸಭೆ ಮಾಡಿ ದರ ನಿಗದಿ ಮಾಡಿ ಕಾರ್ಖಾನೆಗಳನ್ನು ಪ್ರಾರಂಭಿಸಲು ಅನುಕೂಲ ಕಲ್ಪಿಸಬೇಕಾಗಿದೆ. ನಾವು ಸರ್ಕಾರದ ಆದೇಶ ಪಾಲಿಸಿ ಎಫ್ಆರ್‌ಪಿ ದರ ನೀಡುವುದಲ್ಲದೇ ಜಿಲ್ಲೆಯ ಕಾರ್ಖಾನೆ ನೀಡುವ ದರ ಕೊಡಲು ಬದ್ಧರಿದ್ದೇವೆ ಎಂದರು.

ರೈತರನ್ನು ಆರ್ಥಿಕವಾಗಿ ಬಲಪಡಿಸುವ ಉದ್ದೇಶದಿಂದ ಅವರು ಬೆಳೆದ ಕಬ್ಬಿಗೆ ಉತ್ತಮ ಬೆಲೆ ನೀಡುತ್ತಿದ್ದೇವೆ. ದಿ.ರಾವಸಾಹೇಬ ಪಾಟೀಲ ಅವರು ರೈತರಿಗೆ ನ್ಯಾಯಯುತ ಬೆಲೆ ನೀಡಲು ಈ ಸಕ್ಕರೆ ಕಾರ್ಖಾನೆ ಮೂಲಕ ವಿಶೇಷ ಪ್ರಯತ್ನ ಮಾಡಿದ್ದರು. ಅವರ ಮಾರ್ಗದರ್ಶನದಲ್ಲಿ ಮುಂದೆ ಸಾಗಿದ್ದೇವೆ. ಕಬ್ಬು ಬೆಳೆಗಾರರ ಪ್ರಗತಿಗಾಗಿ ವಿವಿಧ ಯೋಜನೆ ಕೈಗೊಂಡಿದ್ದೇವೆ. ಕಾರ್ಖಾನೆಯ ಕ್ರಷಿಂಗ್ ಸಾಮರ್ಥ್ಯ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಸುಭಾಷ ಜೋಶಿ, ಉತ್ತಮ ಪಾಟೀಲ, ಅಭಿನಂದನ ಪಾಟೀಲ, ಮಲ್ಲಿಕಾರ್ಜುನ ಕವಟಗಿಮಠ, ದಕ್ಷಿಣ ಭಾರತ ಜೈನ ಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ, ಸಂಜಯ ಶಿಂತ್ರೆ, ಸಿ.ಬಿ.ಕೋರೆ ಕಾರ್ಖಾನೆ ನಿರ್ದೇಶಕ ಮಹಾವೀರ ಕಾತ್ರಾಳೆ, ಸಂದೀಪ ಪಾಟೀಲ, ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ರಾಜೀವ ಚೌಗಲಾ, ಸುದರ್ಶನ ಖೋತ, ಬಾಬಣ್ಣ ಖೋತ, ನಿಕು ಪಾಟೀಲ, ಅರುಣ ನಿಕಾಡೆ, ರಾಕೇಶ ಶಿಂತ್ರೆ, ಮೀನಾಕ್ಷಿ ಪಾಟೀಲ, ಪಿಂಟು ಕಾಂಬಳೆ, ಶ್ಯಾಮ ರೇವಡೆ, ರಾಮಾ ಮಾನೆ, ರವಿ ಮಾಳಿ, ಕಾರ್ಖಾನೆ ಸಿಇಒ ಮಹಾವೀರ ಪಾಟೀಲ ಇತರರಿದ್ದರು.

ಸಹಕಾರಿ ವಲಯದಲ್ಲಿನ ಅನುಭವದಿಂದಾಗಿ ನಾವು ಸಕ್ಕರೆ ಕ್ಷೇತ್ರದಲ್ಲಿ ಯಶಸ್ವಿ ಹೆಜ್ಜೆ ಇಡುತ್ತಿದ್ದೇವೆ. ರೈತರ ಕಬ್ಬಿಗೆ ನ್ಯಾಯಯುತ ಬೆಲೆ ನೀಡುವ ಮೂಲಕ ಅವರ ಆರ್ಥಿಕ ಜೀವನಮಟ್ಟ ಸುಧಾರಣೆಗೆ ಪ್ರಯತ್ನಿಸಿದ್ದೇವೆ. ಎಲ್ಲರ ಸಹಕಾರದಿಂದಾಗಿ ಪ್ರತಿ ಹಂಗಾಮು ಯಶಸ್ವಿಯಾಗಿ ಸಾಗುತ್ತಿದೆ. | ಉತ್ತಮ ಪಾಟೀಲ ಯುವ ಮುಖಂಡ