ಜಿಲ್ಲೆ

ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಬ್ಬಿನ ಲಾರಿ

ರಾಜಣ್ಣ

ಯಳಂದೂರು: ತಾಲೂಕಿನ ಕೆ.ದೇವರಹಳ್ಳಿ ಗ್ರಾಮದ ಜಮೀನಿನಿಂದ ಕಬ್ಬು ತುಂಬಿಕೊಂಡು ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಕಬ್ಬು ತುಂಬಿದ್ದ ಲಾರಿಯನ್ನು ಇಬ್ರಾಹಿಂ ಚಾಲನೆ ಮಾಡುತ್ತಿದ್ದರು. ಗಂಗವಾಡಿ ಗ್ರಾಮದ ರೈತರಾದ ಜಿ.ಪಿ.ಮಹೇಶ್ ಹಾಗೂ ದಾಸನಹುಂಡಿ ಗ್ರಾಮದ ನಾಗೇಂದ್ರ ಅವರ ಜಮೀನಿನಿಂದ ಕಬ್ಬು ತುಂಬಿ ಸಕ್ಕರೆ ಕಾರ್ಖಾನೆಗೆ ಸಾಗಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಲಾರಿ ಪಲ್ಪಿ ಹೊಡೆದಿದೆ. ಆದರೆ ಚಾಲಕ ಇಬ್ರಾಹಿಂ, ಕ್ಲೀನರ್ ಅಶೋಕ್ ಅವರು ಲಾರಿಯಿಂದ ಜಿಗಿದಿದ್ದರಿಂದ ಅವರಿಗೆ ಅಲ್ಪ ಸ್ವಲ್ಪ ತರಚಿದ ಗಾಯಗಳಾಗಿವೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.