ಕಲಬುರಗಿ: ನಗರದ ರಾಮ ಮಂದಿರ ವೃತ್ತದ ಬಳಿ ಟನ್ ಕಬ್ಬಿಗೆ 5,500 ರೂ. ದರ ನಿಗದಿ ಹಾಗೂ ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ರೈತರು ನಡೆಸುತ್ತಿದ್ದ ಹೋರಾಟದ ಟೆಂಟ್ನ್ನು ಶುಕ್ರವಾರ ತೆರವುಗೊಳಿಸಿದ ಪೊಲೀಸರು, ರೈತ ಹೋರಾಟಗಾರರನ್ನು ವಶಕ್ಕೆ ಪಡೆದಿದ್ದು, ಹೆದ್ದಾರಿ ಪಕ್ಕ ಪ್ರತಿಭಟನೆ ಮುಂದುವರಿದಿದೆ.
ನಾಲ್ಕು ದಿನದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆಯಿಂದ ಹಾಕಿದ್ದ ಟೆಂಟ್ನ್ನು ತೆರವುಗೊಳಿಸಿದ ಪೊಲೀಸರ ಕ್ರಮ ಖಂಡಿಸಿ ರೈತರು ರಸ್ತೆ ಮೇಲೆ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತ ಮುಖಂಡರಾದ ಸಿದ್ದರಾಮ ಡಣ್ಣೂರು, ಬಸವರಾಜ ಕೋರಿ, ಮಲ್ಲಿಕಾರ್ಜುನ ಸಾರವಾಡ್ ಸೇರಿ ಒಂಬತ್ತು ಹೋರಾಟಗಾರರನ್ನು ವಶಕ್ಕೆ ಪಡೆದರು. ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟ ಪೊಲೀಸರು ರಸ್ತೆ ಬದಿ ಟೆಂಟ್ ಹಾಕಿಕೊಂಡು ಪ್ರತಿಭಟನೆ ಮುಂದುವರಿಸಲು ಅವಕಾಶ ನೀಡಿದ್ದು, ಹೋರಾಟ ಮುಂದುವರಿಸಿದರು.
ರೈತರ ಹೋರಾಟಕ್ಕೆ ವಿವಿಧ ಸಂಟನೆಗಳ ಸಾಥ್: ಶುಕ್ರವಾರ ಇಡೀ ದಿನ ಹಲವು ಸ್ವಾಮೀಜಿಗಳು, ರೈತ, ದಲಿತ, ವಿದ್ಯಾರ್ಥಿ ಸಂಟನೆಗಳು, ಸಾರ್ವಜನಿಕರು ಭಾಗವಹಿಸಿ, ಬೆಂಬಲಿಸಿದರು. ಹೋರಾಟಕ್ಕೆ ದಲಿತ ಸೇನೆ, ವಿಜಯಸೇನೆ ಹಾಗೂ ಕಾನೂನು ವಿದ್ಯಾರ್ಥಿಗಳು ಸಾಥ್ ನೀಡಿದರು.
ವಿಜ್ಞಾನೇಶ್ವರ ಕಾಲೇಜಿನ ವಿದ್ಯಾರ್ಥಿನಿಯರಾದ ಮಲ್ಲಿಕಾ, ಅಂಜನಾ, ಅಂಕಿತಾ ಹಾಗೂ ವಿಜಯಲಕ್ಷಿ$್ಮ ಭಾಗವಹಿಸಿ, ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀಶೈಲಂ ಸಾರಂಗಮಠದ ಡಾ. ಶ್ರೀ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ರಾಜ್ಯ ರೈತ ಸಂದ ಕಾರ್ಯಾಧ್ಯಕ್ಷ ಮಹೇಶ ಸುಬೇದಾರ್, ಜಿಲ್ಲಾ ಕಾರ್ಯದರ್ಶಿ ಸಿದ್ದರಾಮ್ ದಣ್ಣೂರು, ಯಾದಗಿರಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮುಷ್ಟೂರು, ಶರಣಪ್ಪ ಮಮಶೆಟ್ಟಿ, ಸಿದ್ದು ಎಸ್.ಎಲ್, ಕರೆಪ್ಪ ಕರಗೊಂಡ, ಜಗದೇಶ ಪಾಟೀಲ್ ರಾಜಾಪುರ, ಅಶೋಕ ಹೂಗಾರ, ಬಸವರಾಜ ಚಾನಕೋಟೆ, ಬಸವರಾಜ ಕೋರಿ, ಶರಣಗೌಡ ಮಾಲಿಪಾಟೀಲ್ ಇತರರಿದ್ದರು.