ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಕಬ್ಬು ಬೆಳಗಾರರ ಸಂಘದ ಸಂಚಾಲಕ ಎನ್.ಎಲ್.ಭರತ್‌ರಾಜ್ ಮಾತನಾಡಿದರು. ಸಿದಗೌಡ ಮೊದಗಿ, ಜಿ.ಎಂ ಜೈನೇಖಾನ್, ಬಿ.ಎಸ್. ಸೋಪ್ಪಿನ ಇದ್ದರು. 
ಜಿಲ್ಲೆ

ಕಬ್ಬು ಬೆಳಗಾರರ ರಾಜ್ಯ ಸಮ್ಮೇಳನ 29ರಂದು

ಶಂಕರ ಗೆಜ್ಜಿ

ಬೆಳಗಾವಿ: ಕಬ್ಬು ಬೆಳಗಾರರ ಸಂಘದ ರಾಷ್ಟ್ರೀಯ ಸಮಿತಿ ಸಭೆ ಹಾಗೂ ರಾಜ್ಯ ಸಮ್ಮೇಳನವು ಸೆ.29, 30 ರಂದು ಕಲಬುರಗಿಯಲ್ಲಿ ಜರುಗಲಿದೆ ಎಂದು ಕರ್ನಾಟಕ ಕಬ್ಬು ಬೆಳಗಾರರ ಸಂಘದ ಸಂಚಾಲಕ ಎನ್.ಎಲ್.ಭರತ್‌ರಾಜ್ ತಿಳಿಸಿದ್ದಾರೆ.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ನಡೆಯಲಿರುವ ಕಬ್ಬು ಬೆಳೆಗಾರರ ಸಮ್ಮೇಳನದಲ್ಲಿ ಉತ್ತರ ಪ್ರದೇಶ, ಪಂಜಾಬ, ಹರಿಯಾಣ, ತೆಲಗಾಂಣ ಸೇರಿದಂತೆ ಹಲವು ರಾಜ್ಯದ ಕಬ್ಬು ಬೆಳೆಗಾರರು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ದೇಶದ ಕಬ್ಬು ಬೆಳೆಗಾರರ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಸಿದಗೌಡ ಮೊದಗಿ, ಜಿ.ಎಂ ಜೈನೇಖಾನ್, ಬಿ.ಎಸ್. ಸೋಪ್ಪಿನ ಇತರರಿದ್ದರು.