ಈ ಸಲದ ಹಂಗಾಮಿನಲ್ಲಿ ಕಬ್ಬಿಗೆ ಹೆಚ್ಚಿನ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಲು ಅ.10ರಂದು ಬೆಳಗ್ಗೆ 11ಕ್ಕೆ ರಾಯಬಾಗ ತಾಲೂಕಿನ ಹಾರೂಗೇರಿಯ ಕ್ರಾಸ್ ಬಳಿ ಹೋರಾಟ ಏರ್ಪಡಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ಪ್ರಕಾಶ ನಾಯಕ ತಿಳಿಸಿದರು.
ನಗರದ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾರ್ಖಾನೆಗಳು ಬಾಯ್ಲರ್ ಪೂಜೆ ಮಾಡಿ, ಕಬ್ಬು ನುರಿಸಲು ಸಜ್ಜಾಗಿ ನಿಂತಿವೆ. ನವೆಂಬರ್ 1ರಿಂದ ಕಾರ್ಯಾರಂಭವನ್ನೂ ಮಾಡಲಿವೆ. ಅದಕ್ಕೂ ಮೊದಲು ಸರ್ಕಾರ ಪ್ರತಿ ಟನ್ ಕಬ್ಬಿಗೆ 5500 ರೂ. ದರ ನಿಗದಿ ಮಾಡಬೇಕು. ಹೋರಾಟದ ಬಳಿಕ ರೈತ ಮುಖಂಡರು 30ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆ ಮಾಡುವುದಕ್ಕೂ ನಿರ್ಧರಿಸಿದ್ದೇವೆ ಎಂದು ಹೇಳಿದರು.
ಚೂನಪ್ಪಾ ಪೂಜೇರಿ, ಕಿಶನ ನಂದಿ ಇದ್ದರು.