ಜಿಲ್ಲೆ

ಸಕ್ಕರೆ ಕಾಯಿಲೆಯಿಂದ ಬೇಸತ್ತು ಮಹಿಳೆ ಆತ್ಮಹತ್ಯೆ

ರಟ್ಟಿಹಳ್ಳಿ: ಸಕ್ಕರೆ ಕಾಯಿಲೆ ಹಾಗೂ ಮೂಲವ್ಯಾದಿ ತೊಂದರೆಯಿಂದ ಬೇಸತ್ತು ಮಹಿಳೆಯೊಬ್ಬರು ತುಂಗಾ ಮೇಲ್ದಂಡೆ ಯೋಜನೆ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಿಕ್ಕಎಡಚಿ ಗ್ರಾಮದ ನಡೆದಿದೆ.

ಪಟ್ಟಣದ ಕನ್ನಡ ಸರ್ಕಾರಿ ಶಾಲೆ ಹಿಂಭಾಗದ ನಿವಾಸಿ ಸುನಂದಾ ವೀರಪ್ಪ ಬೆನ್ನೂರ (58) ಮೃತ ಮಹಿಳೆ.

ಈ ಕುರಿತು ರಟ್ಟಿಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.