ದೇಶಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಸುಗಮ್ಯ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು. ಜೆನೆಟ್​ ಬಬೋರ್ಜಾ, ಗ್ರೇಸಿ ಕುವೆಲ್ಲೊ, ಫ್ಲೇವಿಯಾ ಡಿಸೋಜ, ಅನ್ಸಿಲ್ಲಾ ಲೂವಿಸ್​ ಇತರರಿದ್ದರು. 
ಜಿಲ್ಲೆ

ದೇಶದ ಸ್ತ್ರೀಯರಿಗೆ ಸೂಕ್ತ ರಕ್ಷಣೆ ನೀಡಿ

ಸುಗಮ್ಯ ಮಹಿಳಾ ಒಕ್ಕೂಟ ಆಗ್ರಹ | ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ

ವಿಜಯವಾಣಿ ಸುದ್ದಿಜಾಲ ಉಡುಪಿ
ದೇಶಾದ್ಯಂತ ಸ್ತ್ರೀಯರು ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಹಾಗೂ ಕೊಲೆ ಘಟನೆಗಳು ಹೆಚ್ಚುತ್ತಿರುವುದನ್ನು ಖಂಡಿಸಿ ಸುಗಮ್ಯ ಮಹಿಳಾ ಒಕ್ಕೂಟದ ಉಡುಪಿ ಜಿಲ್ಲಾ ಘಟಕದ ಸದಸ್ಯೆಯರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಭಯದ ಜೀವನ

ಮಾನಿನಿ ರಾಜ್ಯ ಮಹಿಳಾ ಒಕ್ಕೂಟದ ಪ್ರತಿನಿಧಿ ಜೆನೆಟ್​ ಬಬೋರ್ಜಾ ಮಾತನಾಡಿ, ಕೋಲ್ಕತಾ ಸೇರಿದಂತೆ ದೇಶದ ಎಲ್ಲೆಡೆ ಸ್ತ್ರೀಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಭಯದಿಂದ ಜೀವನ ಸಾಗಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ, ಭದ್ರತೆ ದೊರಕಲು ಕಠಿಣ ಕ್ರಮ ಹಾಗೂ ಕಾನೂನು ರಚಿಸಿ ಅನುಷ್ಠಾನಗೊಳಿಸಬೇಕು ಎಂದರು.

6 ಸಾವಿರ ಸದಸ್ಯರ ಸಹಿ

ಒಕ್ಕೂಟದ 6 ಸಾವಿರದಷ್ಟು ಸದಸ್ಯರ ಸಹಿಯನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರಿಗೆ ಹಸ್ತಾಂತರಿಸಲಾಯಿತು.

ಸುಗಮ್ಯ ಒಕ್ಕೂಟದ ಜಿಲ್ಲಾಧ್ಯೆ ಗ್ರೇಸಿ ಕುವೆಲ್ಲೊ, ಕಾರ್ಯದರ್ಶಿ ಫ್ಲೇವಿಯಾ ಡಿಸೋಜ, ಉಪಾಧ್ಯೆ ಅನ್ಸಿಲ್ಲಾ ಲೂವಿಸ್​, ಕೋಶಾಧಿಕಾರಿ ಸಿಂತಿಯಾ ಡಿಸೋಜಾ, ಸಹ ಕಾರ್ಯದರ್ಶಿ ಫ್ಲೋರಿನ್​ ಮೆಂಡೊನ್ಸಾ, ಮರಿನಾ ಲೂವಿಸ್​ ಮತ್ತು ಪದಾಧಿಕಾರಿಗಳು ಇದ್ದರು.