ಜಿಲ್ಲೆ

ಕಣ್ಣು ಕಾಣದ್ದಕ್ಕೆ ನೊಂದು ಬಾವಿಗೆ ಜಿಗಿದು ಆತ್ಮಹತ್ಯೆ

ರವಿ ಎಸ್. ಬಳೂಟಗಿ

ನರಗುಂದ: ದೃಷ್ಟಿ ದೋಷದಿಂದಾಗಿ ಮನನೊಂದ ವ್ಯಕ್ತಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ಗ್ರಾಮದ ವರ್ಧಮಾನ ಧರನೇಂದ್ರಪ್ಪ ಬೋಗಾರ (63) ಆತ್ಮಹತ್ಯೆಗೆ ಶರಣಾದ ದುರ್ದೈವಿ.

ಧರನೇಂದ್ರ ಅವರಿಗೆ ಸರಿಯಾಗಿ ಕಣ್ಣು ಕಾಣದ್ದಕ್ಕೆ ಒಂದು ಕಣ್ಣಿನ ಪೊರೆ ತೆಗೆಸಿದ್ದ. ತಿಂಗಳ ಹಿಂದೆ ಮತ್ತೊಂದು ಕಣ್ಣಿನಲ್ಲಿಯೂ ಸಮಸ್ಯೆ ಕಾಣಿಸಿಕೊಂಡಾಗ ಆ ಕಣ್ಣಿನ ಶಸ್ತ್ರ ಚಿಕಿತ್ಸೆಯೂ ಮಾಡಿಸಿದ್ದರು. ಆದರೆ, ಮೊದಲು ಶಸ್ತ್ರ ಚಿಕಿತ್ಸೆ ಮಾಡಿಸಿದ್ದ ಕಣ್ಣಿನ ದೋಷ ಕಡಿಮೆಯಾಗಿರಲಿಲ್ಲ. ಆಗಾಗ ವಿಪರೀತ ತಲೆನೋವು ಕಾಡುತ್ತಿತ್ತು. ಇದರಿಂದ ಮಾನಸಿಕವಾಗಿ ನೊಂದು ಜಮೀನಿನ ಪಕ್ಕದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಪತ್ನಿ ಪ್ರೇಮಾ ಬೋಗಾರ ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.