ಜಿಲ್ಲೆ

ದುರ್ಗಾದೇವಿ ಶಿಕ್ಷಣ ಸಮಿತಿಯಲ್ಲಿ ಇಸ್ರೋ ವಿಜ್ಞಾನಿ ಸುಧೀಂದ್ರ ಬಿಂದಗಿ ಅವರಿಗೆ ಸನ್ಮಾನ

Gadag - Shivanand Hiremath

ಗದಗ : ಇನ್ನು ಮುಂದೆ ಹುಣ್ಣಿಮೆ ಚಂದಿರನನ್ನು ನೋಡಬೇಕಾದರೆ ಅಲ್ಲಿ ಭಾರತದ ಧ್ವಜ ಹಾರಾಡುತ್ತಿರುವದನ್ನು ನೋಡಿ ಪ್ರತಿಯೊಬ್ಬರು ಭಾರತೀಯರು ಹೆಮ್ಮೆ ಪಡಬೇಕೆಂದು ಚಂದ್ರಯಾನ ಯಶಸ್ವಿಗೊಳಿಸಿದ ಇಸ್ರೋ ವಿಜ್ಞಾನಿಗಳ ತಂಡದಲ್ಲಿನ ಗದುಗಿನ ವಿಜ್ಞಾನಿ ಸುಧೀಂದ್ರ ಬಿಂದಗಿ ಅವರು ಹೇಳಿದರು.
ನಗರದ ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯ ಆವರಣದಲ್ಲಿ ಬುಧವಾರ ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿ, ಹಾಲುಮತ ಮಹಾಸಭಾ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು. ಭೂಮಿಯಿಂದ ೩.೮೪ ಲಕ್ಷ ಕೀ.ಮಿ ದೂರದಲ್ಲಿರುವ ಚಂದ್ರನ ದಕ್ಷಿಣ ದ್ರುವದಲ್ಲಿ ಚಂದ್ರಯಾನ-೩ ರ ಲ್ಯಾಂಡಿAಗ್ ಯಶಸ್ವಿಯಾಗಿರುವದರಿಂದ ಅಲ್ಲಿನ ಹವಾಮಾನ, ಖನಿಜ ಸಂಪತ್ತು ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಯಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಚಂದ್ರಯಾನ-೪,೫ ಮುಂದುವರೆದು ಖಗೋಳಶಾಸ್ತçದ ಅಧ್ಯಯನ ನಿರಂತರವಾಗಿ ಮುಂದುವರೆಯಲಿದೆ. ಸೆ. ೨ ರಂದು ಸೂರ್ಯನ ಕುರಿತು ಅಧ್ಯಯನ ಮಾಡಲು ಆಧಿತ್ಯ-ಎಲ್೧ ಉಪಗ್ರಹ ಶ್ರೀಹರಿಕೋಟದಿಂದ ಉಡಾವಣೆಯಾಗಲಿದೆ. ಅಗಷ್ಟ ೨೩ ರ ಚಂದ್ರಯಾನ-೩ ಯಶಸ್ವಿ ನಂತರ ಇಡೀ ಜಗತ್ತು ಭಾರತವನ್ನು ನೋಡುವ ದೃಷ್ಠಿ ಬದಲಾಗಿದೆ ಎಂದರು.
ಇಂದಿನ ವಿದ್ಯಾರ್ಥಿಗಳು ಭಾರತದ ಭವಿಷ್ಯದ ಸಂಪತ್ತುಗಳಾಗಿದ್ದಾರೆ. ವಿಜ್ಞಾನ ತಂತ್ರಜ್ಞಾನದಲ್ಲಿ ಭಾರತವು ಸಾಕಷ್ಟು ಅಭಿವೃದ್ದಿ ಹೊಂದಿರುವದರಿAದ ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಮುನ್ನೆಡೆದು ದೇಶಕ್ಕೆ ಕೊಡುಗೆ ನೀಡಬೇಕು. ಚಂದ್ರಯಾನದಲ್ಲಿ ಹಿರಿಯ ಇಸ್ರೋ ವಿಜ್ಞಾನಿಗಳೊಂದಿಗೆ ನಾನು ಕೂಡಾ ಕೆಲಸ ಮಾಡಿರುವುದು ಹೆಮ್ಮೆ ತಂದಿದೆ. ಮತ್ತು ನಾನು ಇದೇ ಭಾಗದಲ್ಲಿ ಬಾಲ್ಯದ ದಿನಗಳನ್ನು ಕಳೆದಿರುವದರಿಂದ ನನ್ನ ಬಾಲ್ಯವನ್ನು ನೆನಪಿಸಿದ ಎಲ್ಲರಿಗೂ ಅಭಿನಂಧನೆಗಳು ಸಲ್ಲಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ವಿಜ್ಞಾನಿ ಸುಧೀಂದ್ರ ಬಿಂದಗಿ ಅವರು ವಿದ್ಯಾರ್ಥಿಗಳು ಚಂದ್ರನ ಕುರಿತ ಕೇಳಿದ ಹಲವಾರು ಕುತುಹಲ ಪ್ರಶ್ನೆಗಳಿಗೆ ಉತ್ತರಿಸಿ ವಿದ್ಯಾರ್ಥಿಗಳ ವಿಜ್ಞಾನ ಹಾಗೂ ಚಂದ್ರನ ಬಗ್ಗೆ ಇರುವ ಆಸಕ್ತಿಗೆ ಪ್ರಶಂಸೆ ವ್ಯಕ್ತ ಪಡೆಸಿದರು.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ವಾಧಿರಾಜ ಸೊರಟೂರ, ಪ್ರೇಮನಾಥ ಇರಕಲ್, ಸೋಮನಗೌಡ ಪಾಟೀಲ, ಕುಮಾರ ಮಾರನಬಸರಿ, ಸತೀಶ ಗಿಡ್ಡಹನುಮಣ್ಣವರ, ಶಿಕ್ಷಣ ಸಮಿತಿಯ ನಿರ್ದೇಶಕರಾದ ಮೋಹನ ಇಮರಾಪೂರ, ಸಲಹಾ ಸಮಿತಿ ಸದಸ್ಯರಾದ ಮುತ್ತು ಜಡಿ, ಮಲ್ಲೇಶ ಬಿಂಗಿ, ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಜಿಲ್ಲಾಧ್ಯಕ್ಷ ವಿಜಯಕುಮಾರ ಬಣಕಾರ, ಶ್ರೀಮತಿ ಆರ್. ಆರ್. ಗುಳಗುಳಿ, ಕವಿತಾ ಇಮರಾಪೂರ, ಸೋಮು ಮೇಟಿ, ಲಚ್ಚಪ್ಪ ಕುಂಬಾರ, ಗಳಗಂಟಿ, ಶಾಲೆಯ ಮುಖ್ಯೋಪಾದ್ಯಾಯನಿ ಹಸೀನಾ ನದಾಫ್, ಸಹ ಶಿಕ್ಷಕಿಯರಾದ ರೇಖಾ ಅಂಗಡಿ, ಸುಧಾ ತಿರಕಣ್ಣವರ, ವಂದನಾ ಕಲ್ಮನಿ, ಜ್ಯೋತಿ ಅರಸಿದ್ದಿ, ಸಿಬ್ಬಂದಿಗಳಾದ ಲಕ್ಷಿö್ಮÃ ಕಮಡೊಳ್ಳಿ, ಸೈನಾಜ ರೋಣ ಸೇರಿದಂತೆ ಮುಂತಾದವರು ಇದ್ದರು.
ಇದಕ್ಕೂ ಮುನ್ನ ಶಾಲೆಯ ವಿದ್ಯಾರ್ಥಿಗಳು ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಪುಷ್ಪಗಳನ್ನು ದಾರಿಯುದ್ದಕ್ಕೂ ಎರಚುತ್ತ ವಿಜ್ಞಾನಿ ಸುಧೀಂದ್ರ ಬಿಂದಗಿ ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡರು.