ಜಿಲ್ಲೆ

ಸುಧನ್ವ ಮೋಕ್ಷ ಯಕ್ಷಗಾನ ಪ್ರದರ್ಶನ

ವಿನಯ ಹೆಗಡೆ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗಣೇಶಮಂಟಪದಲ್ಲಿ ಗಣೇಶೋತ್ಸವದ ಅಂಗವಾಗಿ ಸರಸ್ವತಿ ಕಲಾ ಟ್ರಸ್ಟ್ ಹೊಸಗದ್ದೆ ಇವರಿಂದ ಸುಧನ್ವ ಮೋಕ್ಷ ಯಕ್ಷಗಾನ ಪ್ರದರ್ಶನಗೊಂಡಿತು.

ಹಿಮ್ಮೇಳದಲ್ಲಿ ಭಾಗವತರಾಗಿ ದರ್ಶನ್ ಭಟ್ಟ ಹಳುವಳ್ಳಿ(ಕಳಸ), ಶಶಿಕಲಾ ಹೆಗಡೆ ದೇವಣಗದ್ದೆ, ಮದ್ದಳೆಯಲ್ಲಿ ಶರತ್ ಹೆಗಡೆ ಜಾಕೈ, ಚಂಡೆಯಲ್ಲಿ ಭಾರ್ಗವ ಹೆಗ್ಗೋಡು ಸಹಕರಿಸಿದರು.

ಮುಮ್ಮೇಳದಲ್ಲಿ ಜನಾರ್ಧನ ತೊಂಡೆಮಡಕಿ, ದೀಪ್ತಿ ಹಾರ್ಸಿಕಟ್ಟಾ, ಭೂಮಿಕಾ ಹೆಗಡೆ, ಮೈತ್ರಿ ಸಂಪೇಸರ, ಶ್ರೀವತ್ಸ ಸಣ್ಮನೆ,ಅಮಿತ್ ಮಾಣಿಕ್ನಮನೆ, ಪ್ರಥ್ವಿ ಹೊಸಗದ್ದೆ, ಆದಿತ್ಯ ಹೊನ್ನೆಹದ್ದ,ಸ್ಕಂದ ಹೊಸಗದ್ದೆ ಇವರು ವಿವಿಧ ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು.

ಅನಂತ ಶಾನಭಾಗ ಹಾಗೂ ಪ್ರಸನ್ನ ಹೆಗಡೆ ಹೊಸಗದ್ದೆ ಕಾರ್ಯಕ್ರಮ ನಿರ್ವಹಿಸಿದರು.