ಜಿಲ್ಲೆ

ದೆಹಲಿ ಕರ್ನಾಟಕ ಸಂಘಕ್ಕೆ 60 ಲಕ್ಷ ರೂ. ದೇಣಿಗೆ ನೀಡಿದ ಸುಧಾ ಮೂರ್ತಿ

ಬೆಂಗಳೂರು: ದೆಹಲಿ ಕರ್ನಾಟಕ ಸಂಘದ ಕಟ್ಟಡಕ್ಕೆ ಲಿಫ್ಟ್ ಅಳವಡಿಕೆ ಹಾಗೂ ವಿವಿಧ ಕಾರ್ಯಚಟುವಟಿಕೆಗಳಿಗೆ ರಾಜ್ಯಸಭಾ ಸಂಸದರ ನಿಧಿಯಿಂದ ಇನ್ಫೋಸಿಸ್​ ಫೌಂಡೇಶನ್​ ಅಧ್ಯಕ್ಷೆ, ರಾಜ್ಯಸಭಾ ಸಂಸದೆ ಸುಧಾ ಮೂರ್ತಿ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಜತೆಗೆ ಗ್ರಂಥಾಲಯಕ್ಕಾಗಿ ಇನ್ಫೋಸಿಸ್​ ಫೌಂಡೇಶನ್​ನಿಂದ 10 ಲಕ್ಷ ರೂ. ನೀಡಿದ್ದಾರೆ.

ಒಟ್ಟು 60 ಲಕ್ಷ ರೂ. ದೇಣಿಗೆ ನೀಡಿರುವ ಸುಧಾ ಮೂರ್ತಿ ಅವರಿಗೆ ದೆಹಲಿ ಕನ್ನಡಿಗರ ಪರವಾಗಿ ಸಂದ ಅಧ್ಯಕ್ಷ ಸಿ.ಎಂ. ನಾಗರಾಜ್​ ಧನ್ಯವಾದ ತಿಳಿಸಿದ್ದಾರೆ.