ಕೆ.ಎಂ.ದೊಡ್ಡಿ: ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸುಧಾ ಅವರು ಆಯ್ಕೆಯಾಗಿದ್ದಾರೆ.
ಮೈನಾವತಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುಧಾ 10 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಶಿಲ್ಪಾ ವಿರುದ್ಧ ಜಯಶೀಲರಾದರು. ಚುನಾವಣಾಧಿಕಾರಿಯಾಗಿ ಮದ್ದೂರು ತಾಲೂಕು ಪಂಚಾಯಿತಿ ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕಿ ರಾಜೇಶ್ವರಿ ಕಾರ್ಯನಿರ್ವಹಿಸಿದ್ದರು.
ನೂತನ ಅಧ್ಯಕ್ಷೆ ಸುಧಾ ಮಾತನಾಡಿ, ನನಗೆ ಅಧ್ಯಕ್ಷರಾಗಲು ಮತ ನೀಡಿ ಸಹಕರಿಸಿದ ಸದಸ್ಯರಿಗೆ ಹಾಗೂ ಕಾಂಗ್ರೆಸ್-ಜೆಡಿಎಸ್ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತೇನೆ. ಅಲ್ಲದೆ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಿಗೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ವಿ.ಶಿವಕುಮಾರ್, ಗ್ರಾ.ಪಂ.ಮಾಜಿ ಅಧ್ಯಕ್ಷೆ ಮೈನಾವತಿ, ಪೂರ್ಣಿಮಾ, ಎಸ್.ಬಿ.ತಮ್ಮೆಗೌಡ, ಎಸ್.ಎನ್. ಸುಂದರೇಶ್, ಜ್ಯೋತಿಯೋಗೇಶ್, ಸಿ. ಸುರೇಶ್, ಎಂಪಿಪಿಎಸ್ ಅಧ್ಯಕ್ಷ ಸುನೀಲ್ ಕುಮಾರ್, ರುದ್ರಯ್ಯ, ಸಿದ್ದೇಗೌಡ, ರಘು ಬೋರೇಗೌಡ, ಕರಡಕೆರೆ ಮನು, ಬೊಮ್ಮೆಗೌಡ, ಪುಟ್ಟಯ್ಯ, ಸಿದ್ದರಾಮೇಗೌಡ, ಶಿವಲಿಂಗಶೆಟ್ಟಿ , ಕೇಬಲ್ ಮಹೇಶ್, ಗಿರೀಶ್ ,ರಂಗೋಲಿ ಲೋಕೇಶ್, ಹರಳಹಳ್ಳಿ ಮಂಜು, ಕೆಂಪರಾಜು, ಗಿರೀಶ್, ಬೊಮ್ಮಲಿಂಗೇಗೌಡ, ಹನುಮಂತೇಗೌಡ (ಶೆಟ್ಟಿ), ಸುನೀಲ್ ಕುಮಾರ್ ಉಪಸ್ಥಿತರಿದ್ದರು.