ತಿ.ನರಸೀಪುರ: ಸ್ವಾಗತ, ಆಮಂತ್ರಣ ಮತ್ತು ಸ್ಥಳಾವಕಾಶ ಉಪ ಸಮಿತಿ ಅಧ್ಯಕ್ಷರಾಗಿ ತಾಲೂಕಿನ ಮೂಗೂರು ಜಿ.ಪಂ. ಮಾಜಿ ಸದಸ್ಯೆ ಸುಧಾ ಮಹದೇವಯ್ಯ ನೇಮಕಗೊಂಡಿದ್ದಾರೆ.
ಸ್ವಾಗತ, ಆಮಂತ್ರಣ ಮತ್ತು ಸ್ಥಳಾವಕಾಶ ದಸರಾ ಉಪ ಸಮಿತಿಗೆ ಮೂವರು ಉಪಾಧ್ಯಕ್ಷರು, 123 ಮಂದಿ ಸದಸ್ಯರನ್ನು ನೇಮಕ ಮಾಡಿ ದಸರಾ ವಿಶೇಷ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಇವರ ನೇಮಕಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಸುನಿಲ್ ಬೋಸ್, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹಾಗೂ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬಿ ಜೆ.ವಿಜಯ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.