ಜಿಲ್ಲೆ

ಕರೊನಾ ಸಂಕಷ್ಟಕ್ಕೆ ಮಿಡಿದ ಸುದೀಪ್; 300 ಆಕ್ಸಿಜನ್​ ಸಿಲಿಂಡರ್​ ದೇಣಿಗೆ

Mandara

ಬೆಂಗಳೂರು: ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಪ್ರತಿದಿನ ಭಾರೀ ಏರಿಕೆ ಕಾಣುತ್ತಿದೆ. ಅದರ ಜತೆ ಆಕ್ಸಿಜನ್​ ಸಮಸ್ಯೆಯೂ ಹೆಚ್ಚಾಗಲಾರಂಭಿಸಿದೆ. ಆ ಹಿನ್ನೆಲೆಯಲ್ಲಿ ಕನ್ನಡದ ಸ್ಟಾರ್​ ನಟ ಕಿಚ್ಚ ಸುದೀಪ್​ ಸೋಂಕಿತರ ಸಹಾಯಕ್ಕೆ ಮುಂದಾಗಿದ್ದಾರೆ.

ಕಿಚ್ಚ ಸುದೀಪ್​ ಬೆಂಗಳೂರಿನ ಆಸ್ಪತ್ರೆಗಳಿಗೆ 300 ಆಕ್ಸಿಜನ್​ ಸಿಲಿಂಡರ್​ಗಳನ್ನು ಪೂರೈಕೆ ಮಾಡಲು ಮುಂದಾಗಿದ್ದಾರೆ. ಈ ಹಿಂದೆಯೂ ಸಹ ಅನೇಕ ಸಂಕಷ್ಟದ ಸಮಯದಲ್ಲಿ ಅವರು ಜನರ ಪರವಾಗಿ ನಿಂತಿದ್ದರು.

ಸುದೀಪ್​ ಕೂಡ ಅನಾರೋಗ್ಯದಿಂದ ಬಳಲಿ ಇದೀಗ ಚೇತರಿಸಿಕೊಂಡಿದ್ದಾರೆ. ಅನಾರೋಗ್ಯದ ಕಾರಣದಿಂದಲೇ ಎರಡು ವಾರಗಳ ಬಿಗ್​ಬಾಸ್​ಗೆ ಅವರು ಹಾಜರಾಗಿರಲಿಲ್ಲ.