ಬೆಂಗಳೂರು: ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ( Sudeep Mother Saroja Passed Away) ನಿಧನರಾಗಿದ್ದಾರೆ. ಸುದೀಪ್ ಅವರ ಮಗಳು ಸಾನ್ವಿ ( Sanvi ) ಸುದೀಪ್ ಪ್ರೀತಿಯ ಅಜ್ಜಿಯ ನಿಧನದಿಂದ ಬೇಸರಗೊಂಡಿದ್ದಾರೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿದ್ದಾರೆ.
ಸುದೀಪ್ ತಾಯಿ ನಿಧನದ ಸುದ್ದಿ ಕೇಳಿ ಸಾವಿರಾರು ಜನರು ಸುದೀಪ್ ಮನೆ ಮುಂದೆ ಜಮಾಯಿಸಿದ್ರು. ಕೆಲ ಜನರು ಫೋಟೋ, ವಿಡಿಯೋಗಳಿಗಾಗಿ ಮಾಡಿದ ಹುಚ್ಚಾಟಕ್ಕೆ ಸ್ವಾನಿ ಸಿಟ್ಟಾಗಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮಿಡಿಯಾದಲ್ಲಿ ಬರೆದುಕೊಳ್ಳುವ ಮೂಲಕವಾಗಿ ಬೇಸರ ಹೊರ ಹಾಕಿದ್ದಾರೆ.
ಸಾನ್ವಿ ಪೋಸ್ಟ್ನಲ್ಲಿ ಏನಿದೆ?:
ಇಂದು ನಮ್ಮ ಕುಟುಂಬಕ್ಕೆ ತುಂಬಾ ಕಷ್ಟದ ದಿನವಾಗಿತ್ತು. ನಮ್ಮ ಮನೆ ಮುಂದೆ ಸೇರಿದ್ದ ಜನರು ಜೋರಾಗಿ ಕಿರುಚುತ್ತಿದ್ರು. ನಮ್ಮ ಮುಖಕ್ಕೆ ಕ್ಯಾಮೆರಾ ಇಡಲು ಕಷ್ಟಪಡ್ತಿದ್ರು. ಕೆಲವರು ಮನುಷ್ಯತ್ವ ಇಲ್ಲದವರಂತೆ ನಡೆದುಕೊಂಡಿದ್ದಾರೆ. ನನ್ನ ತಂದೆ ಅವರ ತಾಯಿಗಾಗಿ ಕಣ್ಣೀರು ಹಾಕ್ತಿದ್ರು. ಆದ್ರೆ ಜನರು ನಮ್ಮನ್ನು ತಳ್ಳಿ-ನೂಕ್ಕಿದ್ದಾರೆ. ಅವರನ್ನು ಗೌರವದಿಂದ ಕಳುಹಿಸಲು ನಾವು ತುಂಬಾ ತೊಂದರೆಗೆ ಒಳಗಾಗುವಂತೆ ಆಯ್ತು. ನಾವು ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಅಳುತ್ತಿದ್ದೇನೆ. ಆದ್ರೆ ಕೆಲ ಜನರು ಅವರು ಪೋಸ್ಟ್ ಮಾಡಬಹುದಾದ ರೀಲ್ಸ್ಗಳ ಬಗ್ಗೆ ಯೋಚಿಸಿ ತೊಂದರೆ ಕೊಟ್ಟಿದ್ದು ಎಷ್ಟು ಸರಿ ಎಂದು ಸಾನ್ವಿ ಇನ್ಸ್ಟಾ ಸ್ಟೋರಿಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸುದೀಪ್ ತಾಯಿ ಸರೋಜಾ ಅವರು ಕಳೆದ ಕೆಲ ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತ. ಆದರೆ, ಚಿಕಿತ್ಸೆ ಫಲಿಸದೇ ಭಾನುವಾರ (ಅ.20) ಬೆಳಗ್ಗೆ 7 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಸುದೀಪ್ ಅವರಿಗೆ ತಮ್ಮ ತಾಯಿ ಸರೋಜಾ ಅಂದರೆ ತುಂಬಾ ಪ್ರೀತಿ. ಇತ್ತೀಚೆಗಷ್ಟೆ ಬಿಗ್ಬಾಸ್ ವೇದಿಕೆಯಲ್ಲೂ ತಾಯಿಯನ್ನು ನೆನಪಿಸಿಕೊಂಡಿದ್ದರು. ಈ ಸೀಸನ್ನ ಮೊದಲ ವೀಕೆಂಡ್ ಪಂಚಾಯಿತಿಗೆ ಬಂದಿದ್ದ ಸುದೀಪ್, ನವರಾತ್ರಿ ಹಿನ್ನೆಲೆಯಲ್ಲಿ ಶೇರವಾನಿ ಧರಿಸಿ, ಬರಿಗಾಲಲ್ಲಿ ವೇದಿಕೆ ಹತ್ತಿದ್ದರು. ನವರಾತ್ರಿ ಇದ್ದ ಕಾರಣ ತಾವು ಹೀಗೆ ಡ್ರೆಸ್ ಮಾಡಿಕೊಂಡು ಬಂದಿದ್ದಾಗಿ ಹೇಳಿದ್ದರು. ಕ್ಯಾಮೆರಾ ನೋಡಿಕೊಂಡು ‘ಅಮ್ಮ ನೋಡಿ, ಬರಿಗಾಲಲ್ಲಿ ಬಂದಿದ್ದೀನಿ, ಹಬ್ಬಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಂಡಿದ್ದೀನಿ’ ಎಂದಿದ್ದರು.
ಸಂಜೀವ್ ಮತ್ತು ಸರೋಜಾ ದಂಪತಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು. ನಟ ಸುದೀಪ್ ಚಿಕ್ಕವರು. ಸರೋಜಾ ಅವರ ಮೃತದೇಹವನ್ನು ಜೆಪಿ ನಗರದ ಇಡಲಾಗಿದ್ದು, ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಬಂದು ದರ್ಶನ ಪಡೆಯುತ್ತಿದ್ದಾರೆ.