ಜಿಲ್ಲೆ

ನ್ಯಾಯಾಧೀಶರಿಂದ ದಿಢೀರ್ ಭೇಟಿ, ಗೋಶಾಲೆಯಲ್ಲಿನ ಗೋವುಗಳ ಹಸ್ತಾಂತರ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪಾ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ರೂರಲ್ ಗುಡಿಬಂಡೆಯ ಅಂಗನವಾಡಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದರು.

ತಾಲೂಕಿನ ನಡುವನಹಳ್ಳಿ ಗ್ರಾಮದ ಬಳಿ ನಮ್ಮ ನಾಡು ಗೋ ಶಾಲೆಯ ಅವ್ಯವಸ್ಥೆಗಳ ಕುರಿತು ನೀಡಿದ್ದ ದೂರು ಆಧರಿಸಿ, ಗೋಶಾಲೆಯಲ್ಲಿದ್ದ ಹಸುಗಳನ್ನು ಬೇರೆ ಗೋಶಾಲೆಗಳಿಗೆ ಸ್ಥಳಾಂತರಿಸಲು ಸೂಚಿಸಿದರು.

ಇದೇ ವೇಳೆ ಈಗಾಗಲೇ ಗೋಶಾಲೆ ಮಾಲೀಕ ವೆಂಕಟೇಶ್ ಎಂಬಾತನನ್ನು ಬಂಧಿಸಲಾಗಿದೆ. ಶಿಡ್ಲಟ್ಟದ ನಾಗಿರೆಡ್ಡಿಹಳ್ಳಿ ಬಳಿಯ ಸರ್ಕಾರಿ ಗೋಶಾಲೆ ಹಾಗೂ ದೇವರಹೊಸಹಳ್ಳಿ ಬಳಿ ಶ್ರೀಕೃಷ್ಣ ಗೋಶಾಲೆಗೆ ಹಸುಗಳನ್ನು ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಬಳಿಕ ನ್ಯಾಯಾಧೀಶರು ಗುಡಿಬಂಡೆ ಪಟ್ಟಣದ ಆಸ್ಪತ್ರೆಯಲ್ಲಿನ ಔಷಧಾಲಯ, ರಕ್ತಪರೀಕ್ಷಾ ಕೇಂದ್ರ, ವಿವಿಧ ವಾರ್ಡ್ ಗಳನ್ನು ಪರಿಶೀಲಿಸಿದರು. ಒಳರೋಗಿಗಳು  ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಹಾಗೂ ಸ್ವಚ್ಛತೆ ಕಾಪಾಡುವಂತೆ, ಮುಖ್ಯವಾಗಿ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದರು.