ಹುಬ್ಬಳ್ಳಿ: ಶುಶ್ರೂಷಾಧಿಕಾರಿಗಳು ಹಾಗೂ ಮಹಿಳೆಯರ ಕುರಿತು ಅವಹೇಳನವಾಗಿ ಡ್ಯಾನ್ಸ್ ಮಾಡಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಇಲ್ಲಿನ ಕಿಮ್ಸ್ನಲ್ಲಿ ಶುಶ್ರೂಷಾಧಿಕಾರಿಗಳು, ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.
‘ಶುಶ್ರೂಷಕರು ಹಾಗೂ ಮಹಿಳೆಯರ’ ಹಾಡೊಂದಕ್ಕೆ ಹೆಜ್ಜೆ ಹಾಕಿದ ಹಾಡಿನ ವಿಡಿಯೋವೊಂದನ್ನು ಎಂಬಿಬಿಎಸ್ ವಿದ್ಯಾರ್ಥಿಗಳು ಮಾಡಿದ್ದಾರೆ.
ಇದರಿಂದ ನಮಗೆ ಅವಮಾನವಾಗಿದೆ. ಕೂಡಲೇ ಈ ವಿಡಿಯೋ ಮಾಡಿದವರು ಹಾಗೂ ಹರಿಬಿಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನಾನಿರತರು ಪಟ್ಟು ಹಿಡಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದರು.
ಹಲವರೊಂದಿಗೆ ಮಾತುಕತೆ ನಡೆಸಿದ ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್್ಸ ಆಡಳಿತ ಕಚೇರಿ ಮುಂದೆ ಹಾಗೂ ಇತರೆಡೆ ಶೂಟ್ ಮಾಡಿರುವುದು ವಿಡಿಯೋದಲ್ಲಿದೆ.
ಆದರೂ ಇದರ ಸತ್ಯಾಸತ್ಯತೆ ಪರಿಶೀಲನೆ ಮಾಡಲಾಗುವುದು. ಇದಕ್ಕೆ ಒಂದು ಸಮಿತಿ ರಚಿಸಿ, ವರದಿ ಕೊಡಲು ಸೂಚಿಸಲಾಗುವುದು. ವರದಿ ಬಂದ ನಂತರ ಅವಮಾನ ಮಾಡಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಕಿಮ್್ಸ ಮೆಡಿಕಲ್ ಕಾಲೇಜ್ನಲ್ಲಿ ಏರ್ಪಡಿಸಿದ್ದ ಸ್ಪರ್ಧೆಯ ಸಲುವಾಗಿ ಈ ಹಾಡಿನ ವಿಡಿಯೋ ಮಾಡಲಾಗಿತ್ತು. ಇದನ್ನು ಸ್ಪರ್ಧೆಯಿಂದ ತೆಗೆದು ಹಾಕಲಾಗಿತ್ತು. ಆದರೆ, ವಿದ್ಯಾರ್ಥಿಯೊಬ್ಬರು, ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದರಿಂದ ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.