ಕುಕನೂರು ಪೊಲೀಸ್ ಠಾಣೆ ಎದುರು ಮಾದಿಗ ಸಮಾಜದಿಂದ ದಿಡೀರ್ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಡಿವೈಎಸ್ಪಿ ಮುತ್ತಣ್ಣ ಸವಗೋಳ ಭೇಟಿ ನೀಡಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ವಕೀಲರಾದ ಎಂ.ಎಚ್.ಉಜ್ಜಮ್ಮನವರ, ಮಹಾಂತೇಶ ಬೂದಗುಂಪ, ದಲಿತ ಮುಖಂಡರಾದ ಮಲ್ಲು ಪೂಜಾರ, ಪ್ರಕಾಶ ಹೊಳೆಪ್ಪನವರ, ನಿಂಗಜ್ಜ ಶಹಪೂರ ಇತರರಿದ್ದರು.ಕುಕನೂರು ಪೊಲೀಸ್ ಠಾಣೆ ಎದುರು ಮಾದಿಗ ಸಮಾಜದಿಂದ ದಿಡೀರ್ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಡಿವೈಎಸ್ಪಿ ಮುತ್ತಣ್ಣ ಸವಗೋಳ ಭೇಟಿ ನೀಡಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ವಕೀಲರಾದ ಎಂ.ಎಚ್.ಉಜ್ಜಮ್ಮನವರ, ಮಹಾಂತೇಶ ಬೂದಗುಂಪ, ದಲಿತ ಮುಖಂಡರಾದ ಮಲ್ಲು ಪೂಜಾರ, ಪ್ರಕಾಶ ಹೊಳೆಪ್ಪನವರ, ನಿಂಗಜ್ಜ ಶಹಪೂರ ಇತರರಿದ್ದರು. 
ಜಿಲ್ಲೆ

ಜಾತಿ ನಿಂದನೆ ಮಾಡಿದ ಹಿನ್ನೆಲೆ ದಿಡೀರ್ ಪ್ರತಿಭಟನೆ

ಗಾಯತ್ರಿ ಮಾಲಿಪಾಟೀಲ್

ಕುಕನೂರು: ಕುಟುಂಬದ ಕಲಹ ಬಗೆಹರಿಸಲು ಬಂದ ಗಾಳೆಪ್ಪ ಹಿರೇಮನಿ ಎನ್ನುವವರ ಮೇಲೆ ಪಿಎಸ್‌ಐ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಹಿನ್ನಲೆಯಲ್ಲಿ ನಗರದ ಪೊಲೀಸ್ ಠಾಣೆ ಎದುರು ನ್ಯಾಯ ನೀಡುವಂತೆ ಆಗ್ರಹಿಸಿ ಮಂಗಳವಾರ ಮಾದಿಗ ಸಮಾಜದಿಂದ ದಿಡೀರ್ ಪ್ರತಿಭಟನೆ ನಡೆಸಲಾಯಿತು.

ಗಾಳೆಪ್ಪ ಹಿರೇಮನಿ ಮಾತನಾಡಿ, ನನ್ನ ಸಂಬಂಧಿಕರಾದ ತಾಲೂಕಿನ ತಳಕಲ್ ಗ್ರಾಮದ ದಂಪತಿಯ ಜಗಳ ಬಗೆಹರಿಸಲು ಪೊಲೀಸ್ ಠಾಣೆಗೆ ತೆರಳಿ ಘಟನೆ ಬಗ್ಗೆ ಪಿಎಸ್‌ಐಗೆ ಹೇಳಲಾಗುತ್ತಿತ್ತು. ಆದರೆ, ನಾನು ಮುಂದುವರೆದು ಅವರ ಜಗಳದ ವಿಷಯದಲ್ಲಿ ಪತಿಗೆ ಬುದ್ಧಿ ಹೇಳಿ ಕಳಿಸಿ ಎಂದು ಹೇಳಿದೆ. ತಕ್ಷಣ ಪಿಎಸ್‌ಐ ಅವರು ಸಿಟ್ಟಿಗೆ ಬಂದು ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿ, ದಲಿತರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ. ಕೂಡಲೇ ನನಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಮುತ್ತಣ್ಣ ಸವಗೋಳ ಮಾತನಾಡಿ, ನಿಮ್ಮ ದೂರನ್ನು ಆಧರಿಸಿ ಎಸ್ಪಿ ಅವರೊಂದಿಗೆ ಚರ್ಚೆಸಿ, ಪಿಎಸ್‌ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ವಕೀಲರಾದ ಎಂ.ಎಚ್.ಉಜ್ಜಮ್ಮನವರ, ಮಹಾಂತೇಶ ಬೂದಗುಂಪ, ದಲಿತ ಮುಖಂಡರಾದ ಮಲ್ಲು ಪೂಜಾರ, ಪ್ರಕಾಶ ಹೊಳೆಪ್ಪನವರ, ನಿಂಗಜ್ಜ ಶಹಪೂರ, ಸಿದ್ದು ಮಣ್ಣಿನವರ್, ಚಂದ್ರಕಾಂತ ಗುಡಿಮನಿ, ಲಕ್ಷ್ಮಣ ಬಾರಿಗಿಡ, ಪ್ರಕಾಶ ಹಿರೇಮನಿ, ಬಸವರಾಜ ಬೂದಗುಂಪಿ, ಮುತ್ತಣ್ಣ ರ‌್ಯಾವಣಕಿ ಇತರರಿದ್ದರು.