ಬಸವಕಲ್ಯಾಣದ ಅನುಭವ ಮಂಟಪದಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟz್ದೆÃವರ ೭೪ನೇ ಜನ್ಮದಿನ ನಿಮಿತ್ತ ಭಾನುವಾರ ಸಂಜೆ ಆಯೋಜಿಸಿದ್ದ ಸುದೈವಿ ಮಕ್ಕಳ ದಿನಾಚರಣೆಯಲ್ಲಿ ವಸತಿ ಶಾಲೆ ಮಕ್ಕಳಿಗೆ ನೋಟ್‌ಬುಕ್, ಪೆನ್ನುö್ನ ವಿತರಿಸಲಾಯಿತು. ಶ್ರೀ ಜಗದ್ಗುರು ಸಿದ್ರಾಮೇಶ್ವರ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಮಾತೆ ಸುಗುಣಾತಾಯಿ, ಸುಭಾಷಚಂದ್ರ ನಾಗರಾಳೆ, ಶಶಿಕಾಂತ ದುರ್ಗೆ, ಗುರುನಾಥ ಗಡ್ಡೆ, ವಿಜಯಲಕ್ಷ್ಮೀ ಹೂಗಾರ, ಸಂಗಶೆಟ್ಟಿ ಇತರರಿದ್ದರು. 
ಜಿಲ್ಲೆ

ಪೂಜ್ಯರಿಂದ ಶರಣ ಸಂಸ್ಕೃತಿ ಮೌಲ್ಯ ಬಿತ್ತುವ ಕಾರ್ಯ

ರಾಜು ಯಮಕನಮರಡಿ

ಬಸವಕಲ್ಯಾಣ: ಬಸವಾದಿ ಶರಣರ ತತ್ವಗಳ ಪ್ರಚಾರ-ಪ್ರಸಾರ ಕಾರ್ಯಕ್ರಮದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನಾಡಿನಲ್ಲಿಯೆ ಮುಂಚೂಣಿಯಲ್ಲಿದಾರೆ. ಪೂಜ್ಯರು ಶಿಕ್ಷಣದ ಮೂಲಕ ಮಕ್ಕಳಲ್ಲಿ ಶರಣ ಸಂಸೃತಿ ಮೌಲ್ಯಗಳನ್ನು ಬಿತ್ತುವ ಕಾರ್ಯ ಮಾಡುತ್ತಿದ್ದಾರೆ ಎಂದು ಬಸವ ಮಹಾಮನೆಯ ಪೂಜ್ಯ ಶ್ರೀ ಜಗದ್ಗುರು ಸಿದ್ರಾಮೇಶ್ವರ ಸ್ವಾಮೀಜಿ ನುಡಿದರು.

ನಗರದ ಅನುಭವ ಮಂಟಪದಲ್ಲಿ ವಿಶ್ವ ಬಸವಧರ್ಮ ಟ್ರಸ್ಟ್. ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ೭೪ನೇ ಜನ್ಮದಿನ ನಿಮಿತ್ತ ಭಾನುವಾರ ಸಂಜೆ ಆಯೋಜಿಸಿದ್ದ ಸುದೈವಿ ಮಕ್ಕಳ ದಿನಾಚರಣೆಯಲ್ಲಿ ನೇತೃತ್ವ ವಹಿಸಿ ಮಾತನಾಡಿದ ಶ್ರೀಗಳು, ಸೇವಾ ಸಾಧನೆಗಳು ನಮ್ಮೆಲ್ಲರಿಗೆ ಆದರ್ಶಪ್ರಾಯವಾಗಿವೆ. ಪೂಜ್ಯರು ತಮ್ಮ ಹುಟ್ಟು ಹಬ್ಬವನ್ನು ಸುದೈವಿ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ನಿಜಕ್ಕೂ ಮಾನವೀಯ ಕಾರ್ಯವಾಗಿದೆ ಎಂದು ಹೇಳಿದರು.

ಅನುಭವ ಮಂಟಪದ ಸಂಚಾಲಕರಾದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಪೂಜ್ಯರು ಅನೇಕ ಭಾಷೆಗಳಲ್ಲಿ ಗ್ರಂಥ ಪ್ರಕಟಿಸಿ ಬಸವತತ್ವ ಪ್ರಚಾರ ಪ್ರಸಾರ ಕೈಗೊಂಡಿದ್ದಾರೆ. ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಂತರ ಅವರ ಮಾರ್ಗದರ್ಶನದಲ್ಲಿ ಅನುಭವ ಮಂಟಪದ ಕಾರ್ಯ ಭರದಿಂದ ಸಾಗುತ್ತಿದೆ ಎಂದರು.

ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುರುನಾಥ ಗಡ್ಡೆ, ನ್ಯಾಯಾವಾದಿ ವಿಜಯಲಕ್ಷ್ಮೀ ಹೂಗಾರ, ಸಂಗಶೆಟ್ಟಿ ಪಸರಗೆ ಚಿಮಕೊಡ ಮಾತನಾಡಿದರು.

ಮಾತೆ ಸುಗುಣಾತಾಯಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಭೀಮಾಶಂಕರ ಮಾಶ್ಯಾಳಕರ, ಬಸವರಾಜ ಶಿವಣಕರ, ಮಹಾದೇವಪ್ಪ ಇಜಾರೆ, ನಿಲಕಂಠಯ್ಯ ಸ್ವಾಮಿ, ಮಲ್ಲಿಕಾರ್ಜುನ ಅಲಗೂಡೆ, ರಾಜಕುಮಾರ ಹೂಗಾರ, ಶಂಕರ, ನಾಗಪ್ಪ ನಿಣ್ಣೆ, ಶಿವಪುತ್ರಪ್ಪ ಗೌರ, ಸಚಿನ ಕೌಟೆ, ಜಕ್ಕಪ್ಪ ಬಿರಾದಾರ, ಶ್ರೀನಿವಾಸ ಬಿರಾಜದಾರ, ದೇವರಾಜ ಮಂಠಾಳ ಇದ್ದರು. ಪ್ರವಚನ ಸೇವಾ ಸಮಿತಿ ಅಧ್ಯಕ್ಷ ರಾಜಕುಮಾರ ರಟಕಲ್ಲೆ ಸ್ವಾಗತಿಸಿದರು. ಶಿವರಾಜ ನೀಲಕಂಠೆ ನಿರೂಪಣೆ ಮಾಡಿದರು. ವಸತಿ ಶಾಲೆ ಮಕ್ಕಳಿಗೆ ನೋಟ್‌ಬುಕ್, ಪೆನ್ನು ವಿತರಿಸಲಾಯಿತು.