Oplus_0 
ಜಿಲ್ಲೆ

ಗುರಿ ತಲುಪಲು ಕಠಿಣ ಶ್ರಮ ಅಗತ್ಯ

ಲಲಾಟಾಕ್ಷ ಎಸ್

ಹಿರೀಸಾವೆ: ವಿದ್ಯಾರ್ಥಿಯು ಜೀವನದಲ್ಲಿ ನಿರ್ದಿಷ್ಟ ಗುರಿ ತಲುಪಬೇಕಾದರೆ ಕಠಿಣ ಶ್ರಮ, ತಾಳ್ಮೆ ಬಹಳ ಮುಖ್ಯ ಎಂದು ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಕೆ.ಆರ್.ಭವ್ಯಾ ಹೇಳಿದರು.


ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಸ್ಕೌಟ್ಸ್ ಹಾಗೂ ಗೈಡ್ಸ್, ರೆಡ್ ಕ್ರಾಸ್ ಮತ್ತು ರೆಡ್ ರಿಬ್ಬನ್ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.


ರಾತ್ರಿ ಮಲಗಿದ್ದಾಗ ಕಾಣುವ ಕನಸು, ವ್ಯಕ್ತಿಯ ಹಿಡಿತದಲ್ಲಿ ಇರುವುದಿಲ್ಲ. ಆದ್ದರಿಂದ ಅದು ನೈಜವಲ್ಲ. ಆದರೆ ನಾವು ಜಾಗೃತವಾಗಿದ್ದು ಜೀವನದಲ್ಲಿ ಏನಾಗಬೇಕು ಎಂಬ ಕನಸು ಕಾಣಬೇಕು. ಅದನ್ನು ತಲುಪಲು ಸತತ ಅಭ್ಯಾಸ ಮಾಡಿದರೆ ಮಾತ್ರ ಸಾಧ್ಯ ಎಂದರು.


ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು. ಪ್ರಾಂಶುಪಾಲ ಪ್ರೊ. ಎಚ್.ಎನ್.ಬಸವರಾಜು, ವಿವಿಧ ಸಮಿತಿಗಳ ಸಂಚಾಲಕರಾದ ಪಿ.ಬಿ.ಕುಮಾರ್, ಎಚ್.ಬಿ.ಸುನೀಲ್ ಕುಮಾರ್, ಪಿ.ಆರ್.ಲಕ್ಷ್ಮೀಶ್, ಉಪನ್ಯಾಸಕರಾದ ಎಂ.ಕೆ.ಮಂಜುನಾಥ್, ಆಶಾ, ಲಕ್ಷ್ಮಣಗೌಡ ಇದ್ದರು. ಕ್ರೀಡೆ , ಸಾಂಸ್ಕೃತಿಕ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.