ರೋಣ: ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವೆ. ಸರ್ಕಾರವು ದಲಿತರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದೆ. ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸೋಮವಾರ ಪಟ್ಟಣದ ಅಂಜುಮನ್ ಶಾದಿ ಮಹಲ್ನಲ್ಲಿ ಅಂಜುಮನ್-ಎ- ಇಸ್ಲಾಂ ಕಮೀಟಿ ಹಾಗೂ ಮುಸ್ಲಿಂ ಸಮುದಾಯದ ವತಿಯಿಂದ ಶಾಸಕ ಜಿ.ಎಸ್. ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ಚುನಾವಣೆಯಲ್ಲಿ ಹೆಚ್ಚು ಮತಗಳಿಂದ ಗೆಲುವು ಸಾಧಿಸುವ ಮೂಲಕ ಜಿ.ಎಸ್. ಪಾಟೀಲ ದಾಖಲೆ ಸೃಷ್ಟಿಸಿದ್ದಾರೆ. ಮುಂದಿನ ಐದು ವರ್ಷಗಳ ಜನಪರ ಕಾರ್ಯಕ್ರಮ ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಗುಲಗಂಜಿ ಮಠದ ಗುರುಪಾದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಹಜರತ್ ಸೈಯದ್ ಸುಲೇಮಾನ ಶಾವಲಿ ದುರ್ಗಾದ ಅಜ್ಜನವರು, ಐ.ಎಸ್. ಪಾಟೀಲ, ವಿ.ಆರ್. ಗುಡಿಸಾಗರ, ಬಾವಾಸಾಬ ಬೇಟಗೇರಿ, ಯುಸೂಫ್ ಇಟಗಿ, ಮಿಥುನ್ ಪಾಟೀಲ, ಪ್ರಭು ಮೇಟಿ, ಸಿದ್ದಣ್ಣ ಬಂಡಿ, ವಿ.ಬಿ. ಸೋಮನಕಟ್ಟಿಮಠ, ಪರಶುರಾಮ ಅಳಗವಾಡಿ, ಶಫೀಕ ಮೂಗನೂರ, ಬಾಷಾಸಾಬ ಇಟಗಿ, ಮಲ್ಲಿಕ ಯಲಿಗಾರ, ಖಾಸೀಂಸಾಬ ಸಂಕನೂರು, ಮಹ್ಮದ ಇಕ್ಬಾಲ್ ಮಹ್ಮದಗೌಸ ಯಲಿಗಾರ, ಅಫ್ತಾಬ್ ಅಹ್ಮದ ತಹಶೀಲ್ದಾರ, ದಾವಲಸಾಬ ಬಾಡಿನ, ಹಸನಸಾಬ ತಟಗಾರ, ಮಂಜುಳಾ ಹುಲ್ಲಣ್ಣವರ,ನಾಜಬೇಗಂ ಯಲಿಗಾರ ಇದ್ದರು.