ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ವಿದ್ಯಾರ್ಥಿ ಸಂಘ, ಯುವ ರೆಡ್ ಕ್ರಾಸ್, ಎನ್‌ಎಸ್‌ಎಸ್ ಘಟಕದ ಉದ್ಘಾಟನಾ ಸಮಾರಂಭ ಶುಕ್ರವಾರ ಏರ್ಪಾಟಾಗಿತ್ತು.
ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಉದ್ಘಾಟಿಸಿ ಮಾತನಾಡಿ, ಸಮಯಕ್ಕೆ ಗೌರವ, ಪರಿಶ್ರಮದ ಕಾರ್ಯನಿರ್ವಹಣೆ, ಪರಿಪೂರ್ಣ ವ್ಯಕ್ತಿತ್ವ, ತಂದೆ, ತಾಯಿ ಹಾಗೂ ಗುರುಗಳನ್ನು ಗೌರವಿಸಬೇಕು. ಇದರಿಂದ ಸಮಾಜದಲ್ಲಿ ಉನ್ನತ ಸ್ಥಾನ ಲಭಿಸಲು ಸಾಧ್ಯ ಎಂದರು.
ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ದೈನಂದಿನ ಅಭ್ಯಾಸದೊಂದಿಗೆ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಮಾನವೀಯ ಮೌಲ್ಯ ರೂಡಿಸಿಕೊಂಡು ತಾವು ಕಲಿತ ಶಾಲಾ-ಕಾಲೇಜ್, ಶಿಕ್ಷಕರು, ಹಿರಿಯ ಸಹಪಾಠಿಗಳನ್ನು ಗೌರವದಿಂದ ಕಾಣಬೇಕು ಎಂದು ಪ್ರತಿಪಾದಿಸಿದರು.
ಪ್ರಾಚಾರ್ಯೆ ಗೀತಾ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಯಶಸ್ವಿ ವ್ಯಕ್ತಿಗಳಾಗಲು ಶಿಸ್ತು ಹಾಗೂ ಸಮಯಪಾಲನೆಯೊಂದಿಗೆ ವಿದ್ಯಾರ್ಜನೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಸಂಸ್ಥೆಯ ಕುಲಸಚಿವೆ ರೂಪಾ ಯಾವಗಲ್, ವಿವಿಧ ವಿಭಾಗ ಮುಖ್ಯಸ್ಥರಾದ ಭರತಕುಮಾರ, ಸಿದ್ಧನಗೌಡ ಹೊಸಮನಿ, ವಿನಾಯಕ ದೇಶಪಾಂಡೆ, ಚಂದ್ರಶೇಖರ ಅರಬಳ್ಳಿ, ಸವಿತಾ ಶಿಂಧೆ, ರಾಜೇಶ ಹೊಂಗಲ್, ರುದ್ರಪ್ಪ ಬಡಿಗೇರ, ಯುವ ರೆಡ್ ಕ್ರಾಸ್ ಘಟಕದ ಮುಖ್ಯಸ್ಥ ಎಸ್. ಮಂಜುನಾಥ, ಕ್ರೀಡಾ ಸಲಹೆಗಾರ ಕಿರಣ ಕಡಕುಂಟ್ಲ, ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಶಶಾಂಕ ಕುಮಾರ, ಸರ್ವೇಶ ಕೋದಾನಪುರ, ಈರನಗೌಡ ಪಾಟೀಲ, ಪ್ರಥಮ ಜಾಧವ, ಶಿವಲೀಲಾ ಹೆಬ್ಬಳ್ಳಿ, ಸಂಗೀತಾ ಮಡಿವಾಳರ ಇತರರು ಇದ್ದರು.
ವರ್ಷಾ ರಾಠೋಡ ಸ್ವಾಗತಿಸಿದರು. ಅಮೃತಾ ಕುಲಕರ್ಣಿ ಅತಿಥಿಗಳನ್ನು ಪರಿಚಯಿಸದರು. ವಾಣಿ ಗಾಣಿಗೇರ ವಂದಿಸಿದರು. ಕಿರಣ ನಲವಡೆ ಹಾಗೂ ಸನ್ಮತಿ ಸುಗಂಧಿ ನಿರೂಪಿಸಿದರು.