ಚಳ್ಳಕೆರೆ: ಚಂದ್ರಯಾನ-3 ಯಶಸ್ವಿ ಉಡಾವಣೆಯಿಂದ ವಿಜ್ಞಾನ ಕ್ಷೇತ್ರದಲ್ಲಿ ಭಾರತ ಅದ್ವಿತೀಯ ಸಾಧನೆ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ ಎಂದು ಛಾಯಾಚಿತ್ರ ಸಂಘದ ತಾಲೂಕಾಧ್ಯಕ್ಷ ನೇತಾಜಿ ಪ್ರಸನ್ನ ಹೇಳಿದರು.
ಚಂದ್ರಯಾನ ಯಶಸ್ವಿ ಸಂಭ್ರಮದ ಹಿನ್ನೆಲೆಯಲ್ಲಿ ನಗರದ ಬನಶ್ರೀ ವೃದ್ಧಾಶ್ರಮದಲ್ಲಿ ಗುರುವಾರ ಸಿಹಿ ಹಂಚಿ ಮಾತನಾಡಿದರು.
ವಿಜ್ಞಾನಿಗಳ ಪರಿಶ್ರಮ ಸಾಧನೆಗೆ ಕಾರಣವಾಗಿದೆ. ದೇಶದ ಗೌರವವನ್ನು ವಿಶ್ವಕ್ಕೆ ಪರಿಚಯಿಸಿದ ಇಸ್ರೋ ಕಾರ್ಯ ಶ್ಲಾಘನೀಯ. ಯುವ ಪೀಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಈ ಕಾರ್ಯ ಸ್ಫೂರ್ತಿ ಆಗಲಿದೆ ಎಂದರು.
ಕಾರ್ಯದರ್ಶಿ ಚಂದ್ರಶೇಖರ್, ನಿರ್ದೇಶಕರಾದ ಬಸವರಾಜ್ ಬಾಬು, ದಿವಾಕರ್, ಅಜಯ್, ಕೊಟ್ರೇಶ್, ಬೈಯಣ್ಣ, ವೃದ್ದಾಶ್ರಮ ವ್ಯವಸ್ಥಾಪಕಿ ಟಿ.ಮಂಜಮ್ಮ ಮತ್ತಿತರರು ಇದ್ದರು.
ವೃದ್ಧಾಶ್ರಮದಲ್ಲಿನ ಹಿರಿಯರು ಪರಸ್ಪರ ಸಿಹಿ ಹಂಚಿ ಹಾಗೂ ರಾಷ್ಟ್ರಧ್ವಜ ಕೈಯಲ್ಲಿಡಿದು ಸಂಭ್ರಮಿಸಿದರು.