ವಿಜಯವಾಣಿ ಸುದ್ದಿಜಾಲ ಧಾರವಾಡ
ಯಶಸ್ಸಿನ ರಹಸ್ಯವಿರುವುದೇ ಏಕಾಗ್ರತೆಯಲ್ಲಿ. ನಿರಂತರ ಪರಿಶ್ರಮದಿಂದ ವಿದ್ಯಾರ್ಥಿಗಳು ಜೀವನದಲ್ಲಿ ಮಹತ್ತರ ಕಾರ್ಯಗಳನ್ನು ಸಾಧಿಸಬಹುದು ಎಮದು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಹುಬ್ಬಳ್ಳಿ ತಾಲೂಕಿನ ರಾಯನಾಳದ ರೇವಣಸಿದ್ಧೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ? ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದೃಢ ಸಂಕಲ್ಪ, ಸಾಧನೆ ಮಾಡುತ್ತೇನೆಂಬ ಛಲದಿಂದ ಅಧ್ಯಯನ ನಿರತರಾದರೆ ಪರೀಕ್ಷೆಯಲ್ಲಿ ಖಂಡಿತ ಜಯ ಸಾಧಿಸಬಹುದು. ಅನೇಕ ಕೊರತೆಗಳಿದ್ದರೂ ಮಹಾನ್ ವ್ಯಕ್ತಿಗಳು ಮಾಡಿದ ಸಾಧನೆ ಗಮನಿಸಬೇಕು. ಪರೀಕ್ಷಾ ಸಮಯದಲ್ಲಿ ಉದ್ವೇಗ ಹಾಗೂ ನಕಾರಾತ್ಮಕ ಭಾವನೆಗೆ ಒಳಗಾಗದೆ ಏಕಾಗ್ರತೆ ಹಾಗೂ ಸಮಯ ಪ್ರಜ್ಞೆಯಿಂದ ಓದಬೇಕು ಎಂದರು.
ಮಹಾಂತೇಶ ಕೋರಿಶೆಟ್ಟರ ಮಾತನಾಡಿದರು. ರಾಯನಾಳ ಗ್ರಾಪಂ ಅಧ್ಯಕ್ಷ ರುದ್ರಪ್ಪ ಮೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡಿಮ್ಹಾನ್ಸನ ಮನೋ ವೈದ್ಯಕೀಯ ಸಮಾಜ ಕಾರ್ಯಕರ್ತ ಪ್ರಶಾಂತ ಪಾಟೀಲ ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವ ತಂತ್ರ ಹಾಗೂ ಕ್ರಮಬದ್ಧ ಅಧ್ಯಯನದ ಬಗ್ಗೆ ಉಪನ್ಯಾಸ ನೀಡಿದರು.
ಮುಖ್ಯಾಧ್ಯಾಪಕಿ ಡಾ. ರೇಣುಕಾತಾಯಿ ಸಂತಬಾ ಅಧ್ಯಕ್ಷತೆ ವಹಿಸಿದ್ದರು.
ಆರ್.ಬಿ. ಪಾಟೀಲ, ಶಿವಾನಂದ ಹರಕುಣಿ, ಎಂ.ಎಸ್. ನರೇಗಲ್, ಗಂಗಮ್ಮ ಮಾರಡಗಿ, ವಿದ್ಯಾವತಿ ಕಾಂಬಳೆ, ಗೀತಾ ಕುಲಕರ್ಣಿ, ಎಸ್.ಎಂ. ಅಮಲಶೆಟ್ಟಿ, ಅರ್ಚನಾ ಜೋಗ, ಚಂದ್ರಕಾ ಪಿ. ಬಸವರಾಜ ಹಿರೇಮಠ, ಡಾ. ಜಿ.ಎನ್. ದೊಡಮನಿ, ಇತರರು ಇದ್ದರು.
ಜಯಪ್ಪ ಕುದರಿಹಾಳ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಾ ಹೂಗಾರ ನಿರೂಪಿಸಿದರು. ರಾಘವೇಂದ್ರ ಎಂ.ಆರ್.ವಂದಿಸಿದರು.