ಜಿಲ್ಲೆ

ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ

ಇಂದಿರಾ ಎನ್ ಕೆ

ಕಾರ್ಕಳ: ನಿರಂತರ ಪರಿಶ್ರಮ ಹಾಗೂ ಶ್ರದ್ಧೆಯಿದ್ದಾಗ ಮಾತ್ರ ಸಾಧಕರಾಗಲು ಸಾಧ್ಯ. ಕರಾಟೆ ಕಲೆ ಇತರ ಎಲ್ಲ ಕಲೆಗಳಿಗಿಂತ ಭಿನ್ನವಾಗಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇರುವ ಕಲೆ, ಇದರಿಂದ ದೈಹಿಕ ಹಾಗೂ ಮಾನಸಿಕವಾಗಿಯೂ ಪ್ರಯೋಜನವಿದೆ ಎಂದು ಯುವ ಉದ್ಯಮಿ ಸ್ವರೂಪ್ ಶೆಟ್ಟಿ ಹೇಳಿದರು.

ಕರಾಟೆ ಬುಡೋಕನ್ ಇಂಟರ್‌ನ್ಯಾಷನಲ್ ವತಿಯಿಂದ ಕುಬುಡೋ ಬುಡೋಕನ್ ಕರಾಟೆ-ಡು, ಬುಡೋಕನ್ ಕರಾಟೆ ಮತ್ತು ಸೆಲ್ಫ್ ಡಿಫೆನ್ಸ್, ಬುಡೋಕನ್ ಕರಾಟೆ ಹಾಗೂ ಮಾರ್ಷಲ್ ಡೋ, ಜೆಬಿಎಸ್ ಕ್ರೀಡಾ ಕರಾಟೆ ಅಕಾಡೆಮಿ ಸಹಯೋಗದಲ್ಲಿ ಬೆಳ್ಮಣ್ ವಿಠೋಭ ಭಜನಾ ಮಂದಿರದಲ್ಲಿ ರಾಜ್ಯಮಟ್ಟದ ಕಪ್ಪು ಪಟ್ಟಿ ಕರಾಟೆ ಪರೀಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂತಾರಾಷ್ಟ್ರೀಯ ಕರಾಟೆ ಪಟು ರುದ್ರ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಕರಾಟೆ ಶಿಕ್ಷಕ ಸಂಘ ಅಧ್ಯಕ್ಷ ಮಹಮ್ಮದ್ ನಧೀಮ್ ಅಧ್ಯಕ್ಷತೆ ವಹಿಸಿದ್ದರು.

ಬುಡೋಕನ್ ಕರಾಟೆ ಇಂಟರ್ ನ್ಯಾಷನಲ್‌ನ ಏಷ್ಯನ್ ಮುಖ್ಯಶಿಕ್ಷಕ ಬಿ.ಪರಮೇಶ್, ಉಡುಪಿ ಜಿಲ್ಲಾ ಸ್ಪೋಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಕೀರ್ತಿ ಜಿ.ಕೆ., ಕುಬುಡೋ ಬುಡೋಕನ್ ಕರಾಟೆ ಅಧ್ಯಕ್ಷ ರವಿಕುಮಾರ ಉದ್ಯಾವರ, ಬುಡೋಕನ್ ಕರಾಟೆ ಮತ್ತು ಸೆಲ್ಫ್ ಡಿಫೆನ್ಸ್‌ನ ಮುಖ್ಯಶಿಕ್ಷಕ ಲಕ್ಷ್ಮೀನಾರಾಯಣ ಆಚಾರ್ಯ, ಜೆಬಿಎಸ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಬೆಳಗಾವಿಯ ಮುಖ್ಯಶಿಕ್ಷಕ ಮಹಾರುದ್ರ ಯಮ್ಮಿ, ಕುಮುಟಾ ಕರಾಟೆ ಮುಖ್ಯಶಿಕ್ಷಕ ಅರವಿಂದ ನಾಯ್ಕ, ಕರಾಟೆ ಮುಖ್ಯಶಿಕ್ಷಕಾರದ ಪ್ರವೀಣ್, ವಿಶಾಲ್ ನಾಯ್ಕ, ವಿಜಯ್ ಶೆಟ್ಟಿ, ಶ್ರೀಧರ್ ಬೈಂದೂರು ಉಪಸ್ಥಿತರಿದ್ದರು.

ಸಂಘಟಕ ಹಾಗೂ ಬುಡೋಕನ್ ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್ ಮುಖ್ಯಶಿಕ್ಷಕ ಸತೀಶ್ ಬೆಳ್ಮಣ್ ಸ್ವಾಗತಿಸಿ, ವೀಣೇಶ್ ಅಮೀನ್ ಸಾಂತೂರು ನಿರೂಪಿಸಿದರು. ರಾಜ್ಯದ ಒಟ್ಟು 80 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು.