ಅರಸೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ., ಬಿಕಾಂ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಡಾ.ಎಸ್.ನಾರಾಯಣ, ವಿಶ್ವನಾಥ್, ಭಾಸ್ಕರ್, ಹರೀಶ್‌ಕುಮಾರ್, ರಾಘವೇಂದ್ರ ಭಜಂತ್ರಿ, ಗಂಗಾ, ಪ್ರತಿಭಾ, ಮೋಹನ್‌ರಾಜ್, ಪ್ರಕಾಶ್ ಪಿಂಟು, ರಾಜೇಶ್ ಖನ್ನಾ ಇದ್ದರು. 
ಜಿಲ್ಲೆ

ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ

ಎಂ.ರವಿ

ಅರಸೀಕೆರೆ (ಗ್ರಾಮಾಂತರ): ವಿದ್ಯಾರ್ಥಿಗಳು ಅನ್ಯ ವಿಚಾರಗಳ ಬಗ್ಗೆ ಆಕರ್ಷಿತರಾಗದೆ ಗುರಿಯನ್ನು ಸಾಧಿಸುವುದಕ್ಕಾಗಿ ದೃಢ ಹೆಜ್ಜೆಯನ್ನಿಡಬೇಕು. ಶಿಸ್ತುಬದ್ಧ ಅಧ್ಯಯನ ಹಾಗೂ ಸತತ ಪ್ರಯತ್ನಗಳಿಂದ ಯಶಸ್ಸು ಸಾಧ್ಯ ಎಂದು ಪ್ರಾಂಶುಪಾಲ ಡಾ.ಎಸ್.ನಾರಾಯಣ್ ಹೇಳಿದರು.

ಅರಸೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಥಮ ವರ್ಷದ ಬಿಎ., ಬಿಕಾಂ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಸಾಲದು. ಅದರ ಜತೆಗೆ ಉದ್ಯೋಗಕ್ಕೆ ಬೇಕಾದ ಕೌಶಲ ಮತ್ತು ತಾಳ್ಮೆ ಒಗ್ಗೂಡಿಸಿಕೊಂಡರೆ ಯಶಸ್ಸಿನ ಹಾದಿ ಸುಲಭವಾಗುತ್ತದೆ. ಪ್ರಸ್ತುತ ಸಾಕಷ್ಟು ಸೌಲಭ್ಯಗಳಿದ್ದರೂ ಇಚ್ಛಾಶಕ್ತಿ ಕೊರತೆಯಿದ್ದು ಆ ದಿಸೆಯಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶ ಸಾಧಿಸಲು ಹಲವು ಸೂತ್ರ ಪಾಲಿಸಿ ಸಮಾಜಕ್ಕೆ ಉತ್ತಮ ಕೊಡುಗೆ ಕೊಡುವಲ್ಲಿ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜಿ.ಎಲ್.ಭಾಸ್ಕರ್ ಮಾತನಾಡಿ, ಪ್ರಥಮ ವರ್ಷದ ವಿದ್ಯಾರ್ಥಿಗಳು ಎಂತಹ ಗೆಳೆತನ ಮಾಡಬೇಕು ಎಂಬುದನ್ನು ಉಪಕಥೆ ಮೂಲಕ ತಿಳಿಹೇಳಿದರು.

ಸಹ ಪ್ರಾಧ್ಯಾಪಕ ರಾಜೇಶ್ ಖನ್ನಾ ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯ ಹಾಗೂ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವ್ಯಾಸಂಗ ಮಾಡಬೇಕು ಎಂದರು.

ಅರ್ಥಶಾಸ್ತ್ರ ಉಪನ್ಯಾಸಕ ವೈ.ಎಂ.ವಿಶ್ವನಾಥ್, ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಡೊನಾಲ್ಡ್ ಪ್ರಕಾಶ್ ಪಿಂಟೋ ಮಾತನಾಡಿದರು. ಮೋಹನ್‌ರಾಜ್, ಕೆ.ಟಿ.ಪ್ರತಿಭಾ, ಡಾ.ಹರೀಶ್‌ಕುಮಾರ್, ಹರೀಶ್, ಎಸ್.ಜೆ.ರವಿ, ರತ್ನಮ್ಮ, ರಾಘವೇಂದ್ರ ಭಜಂತ್ರಿ, ಆರ್.ಗಂಗಾ ಉಪಸ್ಥಿತರಿದ್ದರು.