ಜಿಲ್ಲೆ

ಸ್ಪಷ್ಟ, ನಿಖರ ನಿರ್ಧಾರದಿಂದ ಯಶಸ್ಸು ಸಾಧ್ಯ

ಇಂದಿರಾ ಎನ್ ಕೆ

ಹೆಬ್ರಿ: ದೇಹ ಪ್ರಕೃತಿದತ್ತವಾದದ್ದು, ಇದ್ದ ಹಾಗೆಯೇ ಅದನ್ನು ಸ್ವೀಕರಿಸಬೇಕು. ದೇಹದ ಸೌಂದರ್ಯಕ್ಕೆ ಪ್ರಾಮುಖ್ಯತೆ ಕೊಡದೆ, ಆರೋಗ್ಯಕ್ಕೆ ಪ್ರಾಮುಖ್ಯತೆ ಕೊಡಬೇಕು. ಹದಿಹರೆಯದ ವಯಸ್ಸಿನಲ್ಲಿ ಸಹಜವಾದ ಆಕರ್ಷಣೆಗಳು ಇರುತ್ತವೆ. ಅದನ್ನು ನಿಗ್ರಹಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸ್ಪಷ್ಟ ಗುರಿ, ನಿಖರವಾದ ನಿರ್ಧಾರ, ಶಿಸ್ತು ನಮ್ಮನ್ನು ಜೀವನದಲ್ಲಿ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಕೌನ್ಸಿಲರ್ ಗಿರೀಶ್ ಹೇಳಿದರು.

ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನಡೆದ ಪುನಶ್ಚೇತನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಡಳಿತ ಮಂಡಳಿ ಸದಸ್ಯರಾದ ವಿಷ್ಣುಮೂರ್ತಿ ನಾಯಕ್, ಪ್ರಾಂಶುಪಾಲ ಪ್ರಕಾಶ್ ಜೋಗಿ, ಪಿಆರ್‌ಒ ವಿಜಯಕುವಾರ್ ಶೆಟ್ಟಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜೀವಶಾಸ ಉಪನ್ಯಾಸಕಿ ಚಿತ್ರಾ ವಿ.ನಾಯಕ್ ನಿರೂಪಿಸಿ, ವಂದಿಸಿದರು.