ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಾಟ್ ನೆಕ್ಸ್ ತರಬೇತಿ ಕಾರ್ಯಾಗಾರವನ್ನು ಡಾ. ಟಿ.ಎಂ.ಪ್ರಸನ್ನಕುಮಾರ್ ಉದ್ಘಾಟಿಸಿದರು. ಟಿ.ಚಂದ್ರಶೇಖರ್, ಎನ್.ಎಸ್.ರವೀಶ, ಶಿವಕುಮಾರ್, ರಜನಿಕಾಂತ್, ವಿರೂಪಾಕ್ಷಪ್ಪ ಇತರರಿದ್ದರು. 
ಜಿಲ್ಲೆ

ಕೀಳರಿಮೆ ಬಿಟ್ಟು ಓದಿದರೆ ಯಶಸ್ಸು ಸಾಧ್ಯ

Shivamogga - Desk - Megha MS

ರಿಪ್ಪನ್‌ಪೇಟೆ: ಪ್ರಪಂಚದಲ್ಲಿ ಶೈಕ್ಷಣಿಕ ಸ್ಥಿತಿಗತಿ, ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಹೀಗಿರುವಾಗ ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಅವರ ಸಾಧನೆಗಳಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಿವಮೊಗ್ಗ ಪೆಸಿಟ್ ಕಾಲೇಜಿನ ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಟಿ.ಎಂ.ಪ್ರಸನ್ನಕುಮಾರ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್ಮೆಂಟ್ ಸೆಲ್, ಗ್ರಂಥಾಲಯ ವಿಭಾಗ ಹಾಗೂ ಅಚೀವರ್ ಕೋಚಿಂಗ್ ಅಕಾಡೆಮಿ ಸಹಯೋಗದಲ್ಲಿ ಶುಕ್ರವಾರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಾಟ್ ನೆಕ್ಸಟ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಓದಿದರೆ ಪ್ರತಿಯೊಂದು ಪರೀಕ್ಷೆಯಲ್ಲಿ ಯಶಸ್ಸು ಸಾಽಸಬಹುದು ಎಂದರು.
ಪ್ರಾಚಾರ್ಯ ಟಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಪ್ಲೇಸ್ಮೆಂಟ್ ಸೆಲ್ ಮುಖ್ಯಸ್ಥ ಡಾ. ಎನ್.ಎಸ್.ರವೀಶ, ಶಿವಮೊಗ್ಗ ಅಚೀವರ್ ಆಕಾಡೆಮಿಯ ಮುಖ್ಯಸ್ಥÀ ಶಿವಕುಮಾರ್, ಆಯ್ಕೆ ಶ್ರೇಣಿ ಗ್ರಂಥಪಾಲಕ ಡಾ. ರಜನಿಕಾಂತ್, ಸಹ ಪ್ರಾಧ್ಯಾಪಕ ಡಾ. ವಿರೂಪಾಕ್ಷಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಸಿ.ಕುಮಾರಸ್ವಾಮಿ, ಐಕ್ಯೂಎಸಿ ಸಂಚಾಲಕ ನರೇಂದ್ರ ಕುಳಗಟ್ಟೆ ಇದ್ದರು.