ಶಿಗ್ಲಿ: ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವುದರಿಂದ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗಲಿದೆ ಎಂದು ಶಿಗ್ಲಿ ಬಳಿಗಾರ ಪದವಿ ಪೂರ್ವ ಕಾಲೇಜ್ ಉಪನ್ಯಾಸಕ ತಮ್ಮನಗೌಡ್ರ ಪಾಟೀಲ ಹೇಳಿದರು.
ದೇವಾಂಗ ನೌಕರರ ಸಂಘದ ವತಿಯಿಂದ ಶಾಖಾಂಬರಿ ಸಮುದಾಯ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ವಿದ್ಯಾರ್ಥಿಗಳು ಮೊಬೈಲ್ ಅತಿಯಾಗಿ ಬಳಸುವುದನ್ನು ಬಿಡಬೇಕು. ಓದಿನ ಕಡೆ ಗಮನ ಕೊಡುವುದರಿಂದ ಸಾಧನೆ ಮಾಡಲು ಸಯಲಭವಾಗುತ್ತದೆ ಎಂದು ಹೇಳಿದರು.
ದೇವಾಂಗ ನೌಕರರ ಸಂಘದ ಅಧ್ಯಕ್ಷ ಅಮರೇಶ್ವರ ಹುಲಗೂರ ಮಾತನಾಡಿ, ಪ್ರತಿಭೆ ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಭಾಸ ಹುಲಗೂರ, ನಾರಾಯಣ ಹತ್ತಲಗೇರಿ, ಪ್ರಭಾಕಾರ ಕರ್ಜಗಿ, ಈರಪ್ಪ ಮೂಲಿಮನಿ,ನಾರಯಣಪ್ಪ ಹರವಿ, ಚಂದ್ರಶೇಖರ ಬಂಕಾಪುರ, ಹಾಲೇಶ ನೆಗಳೂರ, ನಾರಾಯಣ ಹುಲಗೂರ, ನಾಗರಾಜ ಕರ್ಜಗಿ, ಅಮರೇಶ್ವರ ಹುಲಗೂರ, ರವಿ ಹತ್ತಲಗೇರಿ, ಮಾಂತೇಶ ಅಸುಂಡಿ, ಶಾರದ ತಪ್ಪಲದ, ರೇವತಿ ಬದರಳ್ಳಿ, ಶೋಭಾ ಯರಡೋಣಿ, ಶಿವಲೀಲಾ ಜನಿವಾರದ ಇದ್ದರು. ನಾರಾಯಣ ಗಾಡದ ಶೋಭಾ ಕುದರಿ, ಶಂಕರ ಶಿರಹಟ್ಟಿ ಕಾರ್ಯಕ್ರಮ ನಿರೂಪಿಸಿದರು.