ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಉಚಿತ ಸಿಇಟಿ&ನಿಟ್​ ತರಬೇತಿ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಸಚಿನ ಕುಳಗೇರಿ, ಚಂದ್ರಕಾಂತ ನಾಟಿಕಾರ, ಡಾ. ಸುಮಾ ಬೋಳರೆಡ್ಡಿ ಇತರರಿದ್ದಾರೆ. 
ಜಿಲ್ಲೆ

ಪೈಪೋಟಿ ಎದುರಿಸಿದರೆ ಯಶಸ್ಸು ಸಾಧ್ಯ

ಗಿರೀಶ ಸಗರ

ವಿಜಯಪುರ: ವಿದ್ಯಾರ್ಥಿಗಳು ತಾವು ಪಡೆದ ಶಿಣಕ್ಕೆ ಮಾತ್ರ ಸೀಮಿತವಾಗದೆ ಸಮಾಜಕ್ಕೆ ಅಗತ್ಯವಿರುವ ಕಾರ್ಯಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ವ್ಯಕ್ತಿಗಳಾಗಬೇಕು ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ್​ ಕುಳಗೇರಿ ಸಲಹೆ ನೀಡಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಬಿವಿಪಿ ವತಿಯಿಂದ ಹಮ್ಮಿಕೊಂಡಿರುವ ಉಚಿತ ಸಿಇಟಿ&ನೀಟ್​ ತರಬೇತಿ ಶಿಬಿರವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸಿಇಟಿ ಮತ್ತು ನೀಟ್​ ತರಬೇತಿ ನೀಡುವ ಕಾರ್ಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ ಮಾಡಿಕೊಂಡು ಬರುತ್ತಿದೆ. ಆಧುನಿಕ ಜಗತ್ತಿನಲ್ಲಿ ಬಹಳಷ್ಟು ಪೈಪೋಟಿ ನಡೆಸಿದಾಗಲೇ ಯಶಸ್ಸು ಕಾಣಲು ಸಾಧ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನಿರಿಸಿ ಅಧ್ಯಯನ ಕೈಗೊಳ್ಳಬೇಕು ಎಂದರು.

ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ನಾಟಿಕಾರ ಮಾತನಾಡಿ, ಬಡ ರೈತ, ಕಾರ್ಮಿಕರ ಮಕ್ಕಳಿಗೆ ಹೆಚ್ಚು ಹಣ ನೀಡಿ ಶಿಣ ಪಡೆಯಲು ಕಷ್ಟಕರವಾದ ಸಂದರ್ಭದಲ್ಲಿ ಉಚಿತವಾಗಿ ತರಗತಿ ನಡೆಸುತ್ತಿರುವ ಎಬಿವಿಪಿ ಕಾರ್ಯ ಶ್ಲಾನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಪನ್ಯಾಸಕ ಅಮಿತ್​ ಸೋಲಾಪುರ ಮಾತನಾಡಿ, ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದಾಗಲೇ ನಮ್ಮ ಸಂಬಂಧಿಕರು, ಸಮಾಜದಲ್ಲಿ ಗೌರವ ಸಾಧ್ಯ. ಪರಿಶ್ರಮದಿಂದ ಅಧ್ಯಯನ ನಡೆಸುವ ಮೂಲಕ ಜೀವನದಲ್ಲಿ ಸಾಧನೆಗೈಯಬೇಕು ಎಂದರು.

ಎಬಿವಿಪಿ ನಗರ ಅಧ್ಯಕ್ಷೆ ಡಾ. ಸುಮಾ ಬೋಳರೆಡ್ಡಿ, ಚೇತನ ಕೋರವಾರ, ಸಂದೀಪ ಅರಳಗುಂಡಿ, ಸ್ನೇಹಾ ಹಿರೇಮಠ, ಐಶ್ವರ್ಯ ಆಸಂಗಿ ಮತ್ತಿತರರಿದ್ದರು.