ಜಿಲ್ಲೆ

ಸವಾಲುಗಳನ್ನೆದುರಿಸಿದರೆ ಯಶಸ್ಸು

ವಿನಯ ಹೆಗಡೆ

ಹೊನ್ನಾವರ: ಬದುಕಿನಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಎದುರಿಸಿ ಯಶಸ್ಸು ಗಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಹೇಳಿದರು.

ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಆರ್ಯ ಈಡಿಗ ನಾಮಧಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಭಾನುವಾರ ಆಯೊಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯಧನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು ಜ್ಞಾನದಾಹಿಗಳು ಆಗಿರುವ ಜತೆಗೆ ವಿನಯವಂತರಾಗಿರಬೇಕು. ವಿದ್ಯೆಯು ವಿನಯವನ್ನು ನೀಡಿದರೆ, ವಿನಯದಿಂದ ಸಮಾಜದಲ್ಲಿ ಸ್ಥಾನಮಾನಗಳು ಲಭಿಸಲಿದೆ ಎಂದರು.

ಸಂಘದ ಅಧ್ಯಕ್ಷ ಸುಧೀಶ ನಾಯ್ಕ ಮಾತನಾಡಿ, ಸಮಾಜದ ಹಲವಾರು ಗಣ್ಯರ ಸಹಕಾರದಿಂದ ವಿದ್ಯಾರ್ಥಿಗಳಿಗೆ ಪೋ›ತ್ಸಾಹ ನೀಡಲಾಗುತ್ತಿದೆ. ಶಿಕ್ಷಣದ ಜೊತೆಗೆ ಒಳ್ಳೆಯ ಗುಣವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದರು.

ವಾಣಿಜ್ಯ ತೆರಿಗೆ ಅಧಿಕಾರಿ ಎಂ.ಟಿ.ನಾಯ್ಕ ಮಾತನಾಡಿ, ದಿನಪತ್ರಿಕೆಗಳಲ್ಲಿ ಪ್ರಸ್ತುತ ಘಟನೆಗಳನ್ನು ಒಳಗೊಂಡಿರುವ ಜ್ಞಾನವು ದೊರಕುವುದು. ವಿದ್ಯಾರ್ಥಿಗಳು ಪತ್ರಕೆಗಳನ್ನು ಓದುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಡ ವಿದ್ಯಾರ್ಥಿಗಳಿಗೆ ಧನಸಹಾಯ ನೀಡಲಾಯಿತು.

ಮಾಜಿ ಸೈನಿಕ ವಾಮನ ನಾಯ್ಕ, ಪ್ರಭಾಕರ ನಾಯ್ಕ, ಧನಂಜಯ ನಾಯ್ಕ, ಸಿ.ಬಿ.ನಾಯ್ಕ, ಕಿಶೋರ ನಾಯ್ಕ, ಗಣೇಶ ನಾಯ್ಕ, ಸತೀಶ ನಾಯ್ಕ, ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಎಂ.ಜಿ.ನಾಯ್ಕ ಸ್ವಾಗತಿಸಿದರು. ಆರ್.ಟಿ.ನಾಯ್ಕ ಧನ್ಯವಾದ ಸಮರ್ಪಿಸಿದರು. ಶಿಕ್ಷಕರಾದ ಪ್ರಕಾಶ ನಾಯ್ಕ ಸುರೇಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.