ವಿಜಯಪುರ : ವಿದ್ಯಾರ್ಥಿಗಳು ಬದಲಾದರೆ ಮಾತ್ರ ಜಗತ್ತು ಬದಲಾಗಲು ಸಾಧ್ಯ. ಬದಲಾವಣೆ ನನ್ನಿಂದಲೇ ಆರಂಭವಾಗಬೇಕು ಎಂಬ ಮನೋಭಾವವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಂಗನಬಸವ ಪಿಯು ಮಹಾವಿದ್ಯಾಲಯದ ಸಮಾಜಶಾಸö ಉಪನ್ಯಾಸಕ ಜಗದೀಶ ಸಾತಿಹಾಳ ಹೇಳಿದರು.
ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಿದ್ಧಸಿರಿ ಕಾನೂನು ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಲïಎಲïಬಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.
ಸಾಧನೆ ಮಾಡಲು ನಿರಂತರ ಶ್ರಮ ಮತ್ತು ಪ್ರಯತ್ನದ ಅವಶ್ಯಕತೆಯಿದೆ. ಬದುಕು ಎಂದರೆ ಅದೊಂದು ಪವಿತ್ರವಾದ ಅನುಭವ. ಅದನ್ನು ಪ್ರತಿ ಕ್ಷಣ ಅನುಭವಿಸಬೇಕು. ಜತೆಗೆ ಹುಟ್ಟು ಸಾವಿನ ಮಧ್ಯದಲ್ಲಿರುವ ದಿನಗಳನ್ನು ಅರ್ಥಪೂರ್ಣವಾಗಿ ಅರ್ಥೈಸಿಕೊಂಡು ಬದುಕಬೇಕು ಎಂದರು.
ವಿದ್ಯಾರ್ಥಿಗಳು ಸಮಯದ ಮಹತ್ವ ಅರಿಯಬೇಕು. ತಮಗಿರುವ ಅಮೂಲ್ಯ ಸಮಯದ ಸದುಪಯೋಗ ಪಡೆದು ನಿರ್ದಿಷ್ಟ ಗುರಿ ಹೊಂದಬೇಕು.
ದುಕು ಕಟ್ಟಿಕೊಳ್ಳುವ ವಯಸ್ಸಿನಲ್ಲಿ ದುಶ್ಚಟಗಳಿಗೆ ಬಲಿಯಾಗದೆ ಶರೀರ ಸಂಪತ್ತು ರಕ್ಷಿಸಿಕೊಳ್ಳಬೇಕು. ಅಲ್ಲದೆ, ಉತ್ತಮ ಹವ್ಯಾಸಗಳನ್ನು ಅಳವಡಿಸಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಚಾರ್ಯೆ ಸುಷ್ಮಾ ದೇಸಾಯಿ, ಕಲಾವತಿ ಅಪರಂಜಿ, ಶ್ವೇತಾ ದೇಸಾಯಿ, ಅಜಿತ ಪ್ಯಾಟಿ ಮತ್ತಿತರರಿದ್ದರು. ಸಾಯಿಶ್ರೀ ಉಟಗಿ ನಿರೂಪಿಸಿದರು. ಸನಾತನ ದೇಶಪಾಂಡೆ ವಂದಿಸಿದರು.