ಜಿಲ್ಲೆ

ಸಬ್ಸಿಡಿಯಲ್ಲಿ ಲೋನ್​ ಕೊಡಿಸುವ ನೆಪದಲ್ಲಿ 14 ಲಕ್ಷ ರೂ. ವಂಚನೆ

Haveri - Kariyappa Aralikatti

ರಾಣೆಬೆನ್ನೂರ: ಸಬ್ಸಿಡಿಯಲ್ಲಿ ಲೋನ್​ ಮಾಡಿಸಿಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ 14 ಲಕ್ಷ ರೂ. ತೆಗೆದುಕೊಂಡು ವಂಚಿಸಿದ ಮೂವರ ವಿರುದ್ಧ ಇಲ್ಲಿಯ ಶಹರ ಪೊಲೀಸ್​ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರ ನಗರದ ಸಾಗರ ನಾಯ್ಕ, ಸಚೀನ ನಾಯ್ಕ ಹಾಗೂ ತಾಲೂಕಿನ ಹುಣಸಿಕಟ್ಟೆ ಗ್ರಾಮದ ಪ್ರದಿಪ ಚವಾಣ ಮೋಸ ಮಾಡಿರುವ ಆರೋಪಿಗಳು.

ಇವರು ಇಲ್ಲಿಯ ಕನಕದಾಸ ನಗರದ ಮಾಲತೇಶ ಮರಿಯಪ್ಪ ಪೂಜಾರ ಎಂಬುವರಿಗೆ ಮೋಸ ಮಾಡಿರುವುದು.

ಆರೋಪಿತರು ಮಾಲತೇಶ ಅವರಿಗೆ ಸಬ್ಸಿಡಿಯಲ್ಲಿ ಬ್ಯಾಂಕ್​ ಲೋನ್​ ಮಾಡಿಸಿಕೊಡುತ್ತೇವೆ ಎಂದು ನಂಬಿಸಿ ಫೋನ್​ ಪೇ ಮೂಲಕ 14 ಲಕ್ಷ ರೂ. ಹಾಕಿಸಿಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ. ಈಗ ಹಣ ಕೇಳಲು ಹೋದರೆ ಇನ್ನಷ್ಟು ಹಣ ಹಾಕು ಲೋನ್​ ಮಾಡಿಸಿಕೊಡುತ್ತೇವೆ ಎಂದು ಹೇಳಿ ಮೋಸ ಮಾಡಿದ್ದಾರೆ ಎಂದು ಮಾಲತೇಶ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.