ಗದಗ: ಮೀನುಗಾರಿಕಾ ಇಲಾಖೆಯಿಂದ ಮತ್ಸೃ ಸಂಪದ ಯೋಜನೆಯಡಿ ವಿವಿಧ ಘಟಕಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮೀನುಮರಿ ಪಾಲಾನಾ ಕೊಳಗಳ ನಿರ್ಮಾಣ, ಮೀನು ಕೃಷಿ ಕೊಳ ನಿರ್ಮಾಣ, ಮೀನು ಮಾರಾಟಕ್ಕೆ ಮೂರು ಚಕ್ರದ ವಾಹನ ಮತ್ತು ಐಸ್ ಬಾಕ್ಸ್ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಆ. 5ರ ಒಳಗಾಗಿ ಮೀನುಗಾರಿಕಾ ಸಹಾಯಕ ನಿರ್ದೇಶಕರ ಇಲಾಖೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.