ಜಿಲ್ಲೆ

ರೈತರಿಗೆ ಸಹಾಯಧನದ ಸೌಲಭ್ಯ

ಜಗದೀಶ ಹೊಂಬಳಿ

ಬೆಳಗಾವಿ: ತಾಳೆಬೆಳೆ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನದ ಸೌಲಭ್ಯ ಕಲ್ಪಿಸಲಾಗುತ್ತಿದೆ. ತಾಳೆ ಬೆಳೆಯನ್ನು ಬೆಳೆಯಲು ರೈತರಿಗೆ ಶೇ. 100 ರಷ್ಟು ತಾಳೆ ಸಸಿಗಳಿಗೆ ಸಹಾಯಧನ ಮೊದಲನೇ ವರ್ಷದಿಂದ ನಾಲ್ಕನೇ ವರ್ಷದವರೆಗೆ ಹಾಗೂ ಅಂತರ ಬೆಳೆ ಬೇಸಾಯಕ್ಕೆ ಶೇ. 30 ರಂತೆ ಸಹಾಯಧನ ನೀಡಲಾಗುತ್ತಿದೆ. ತಾಳೆಬೆಳೆ ಬೇಸಾಯಕ್ಕೆ ಡೀಸೆಲ್ ಪಂಪ್ ಕೈಗೊಳ್ಳಲು, ಹನಿ ನೀರಾವರಿ ಅಳವಡಿಸಲು, ಕೊಳವೆ ಬಾವಿಗೆ, ನೀರು ಸಂಗ್ರಹಣಾ ಘಟಕ, ಎರೆಹುಳು ಘಟಕ, ತಾಳೆ ಹಣ್ಣುಗಳನ್ನು ಕಟಾವು ಮಾಡುವ ಉಪಕರಣ ಕೊಳ್ಳಲು, ಮೊಟರೈಜ್ ಚೀಸೆಲ್, ಕಟಾವು ಏಣಿ, ಚಾಪ್ ಕಟರ್, ಟ್ರಾೃಕ್ಟರ್ ಮತ್ತು ಟ್ರೋಲಿ, ಎತ್ತರವಾದ ತಾಳೆ ಮರಗಳಿಂದ ಹಣ್ಣು ಕಟಾವು ಮಾಡಲು ಸಹಾಯಧನ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆಯಬಹುದು. ಮಾಹಿತಿಗೆ ಹಾಗೂ ಸಹಾಯಧನ ಪಡೆಯಲು ಆಸಕ್ತರು ಅರ್ಜಿಗಳನ್ನು ಸಂಬಂಧಪಟ್ಟ ತಾಲೂಕಾ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಹಾಗೂ ಮೊ.9481293028ಗೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.